Tuesday, April 16, 2024
Homeಸುದ್ದಿರಾಜ್ಯಹೋಳಿ ಹೆಸರಲ್ಲಿ ರಸ್ತೆಯಲ್ಲಿ ಯುವತಿಯರಿಬ್ಬರ ಅಸಭ್ಯ ವರ್ತನೆ : ಸಾವಿರಾರು ರೂ. ದಂಡ

ಹೋಳಿ ಹೆಸರಲ್ಲಿ ರಸ್ತೆಯಲ್ಲಿ ಯುವತಿಯರಿಬ್ಬರ ಅಸಭ್ಯ ವರ್ತನೆ : ಸಾವಿರಾರು ರೂ. ದಂಡ

ಯುವತಿಯರಿಬ್ಬರ ಹೋಳಿ ಆಚರಣೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಯುವತಿಯರಿಬ್ಬರ ಅಸಭ್ಯ ವರ್ತನೆಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ವೈರಲ್ ವೀಡಿಯೋದಲ್ಲಿ, ಇಬ್ಬರು ಯುವತಿಯರು ಮೋಹೆ ರಂಗ್ ಲಗಾ ದೇ ಹಾಡಿಗೆ ಸ್ಕೂಟರ್‌ನ ಹಿಂಭಾಗದಲ್ಲಿ ಕುಳಿತು ಪರಸ್ಪರ ಬಣ್ಣ ಹಚ್ಚುತ್ತಾ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು.

ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ನೋಯ್ಡಾ ಪೊಲೀಸರು ಮೂವರ ವಿರುದ್ದ 33,000 ರೂ ದಂಡ ವಿಧಿಸಿದ್ದಾರೆ.

ಪವಿತ್ರ ಸಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಹೋಲಿ ಹಬ್ಬವನ್ನು ಯುವತಿಯರಿಬ್ಬರು ಅಸಭ್ಯವಾಗಿ ವರ್ತಿಸುವ ಮೂಲಕ ಆಚರಿಸಿರುವುದನ್ನು ಕಂಡು ನೆಟ್ಟಿಗರು ತೀವ್ರವಾಗಿ ಖಂಡಿಸಿದ್ದಾರೆ. ಇದಲ್ಲದೇ ಸ್ಕೂಟರ್ ಓಡಿಸಿದ ಯುವಕ ಹಾಗೂ ಹಿಂಬದಿಯಲ್ಲಿ ಕುಳಿತು ರೀಲ್ಸ್ ಮಾಡುತ್ತಿದ್ದ ಯುವತಿಯರ ವಿರುದ್ದ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.

ಮಾರ್ಚ್ 25ರಂದು ಹಂಚಿಕೊಂಡಿರುವ ಈ ವೀಡಿಯೋ ಇಲ್ಲಿಯವರೆಗೆ 50 ಸಾವಿರಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ಕಂಡು “ಈ ಇಬ್ಬರು ಹುಡುಗಿಯರು ಇಂತಹ ಅಸಭ್ಯ ಕೆಲಸಗಳನ್ನು ಮಾಡಿ ಸಮಾಜಕ್ಕೆ ಏನು ಸಂದೇಶ ನೀಡುತ್ತಾರೆ ಎಂದು ಕಾಮೆಂಟ್ನಲ್ಲಿ ಬರೆದಿದ್ದಾರೆ.

ಈ ವೀಡಿಯೋದಿಂದ ಮಕ್ಕಳಿಗೂ ತೊಂದರೆಯಾಗುವ ಅಪಾಯವಿದೆ ಎಂದು ಮತ್ತೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ನೋಯ್ಡಾ ಪೊಲೀಸರು ಮೂವರ ವಿರುದ್ದ 33,000 ರೂ ದಂಡ ವಿಧಿಸಿದ್ದಾರೆ.

“ಮೇಲಿನ ದೂರಿನ ಆಧಾರದ ಮೇಲೆ,ಸಂಚಾರ ನಿಯಮಗಳ ಉಲ್ಲಂಘನೆಗಾಗಿ ಸಂಬಂಧಪಟ್ಟ ವಾಹನದ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ” ಎಂದು ನೋಯ್ಡಾ ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News