ಸ್ಕೈ ವಾಕರ್ ಪಿಲ್ಲರ್ಗೆ ಡಿಕ್ಕಿ ಹೊಡೆದ KSRTC ಬಸ್ ; 5 ಪ್ರಯಾಣಿಕರು ಗಂಭೀರ

ಚಿಕ್ಕಮಗಳೂರು : ಪ್ರಯಾಣಿಕರಿದ್ದ ಕೆಎಸ್ಆರ್ಟಿಸಿ ಬಸ್ವೊಂದು ಅಪಘಾತಕ್ಕೀಡಾದ ಘಟನೆ ಕಡೂರು ಬಳಿ ನಡೆದಿದೆ.

ಅಂಚೆ ಚೋಮನಹಳ್ಳಿ ಬಳಿ ಚಾಲನಕನ ನಿಯಂತ್ರಣ ತಪ್ಪಿ ಸ್ಕೈ ವಾಕರ್ ಪಿಲ್ಲರ್ ಗೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ಸಿನಲ್ಲಿದ್ದ 5 ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ.

ರಸ್ತೆ ಬದಿಯ ಸ್ಕೈ ವಾಕರ್ ಪಿಲ್ಲರ್ ಗೆ ಕೆಎಸ್ಆರ್ಟಿಸಿ ಬಸ್ ಗುದ್ದಿದೆ. ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಈ ಘಟನೆ ನಡೆದಿದೆ.

ಬಸ್ ಕಡೂರಿನಿಂದ ಅರಸೀಕೆರೆಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.

ಗಾಯಾಳುಗಳನ್ನು ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತ್ತ ಸ್ಕೈ ವಾಕರ್ ಗೆ ಗುದ್ದಿದ ಪರಿಣಾಮ ಬಸ್ ಸಂಪೂರ್ಣ ಜಖಂ ಆಗಿದೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದೆ.

You cannot copy content from Baravanige News

Scroll to Top