Sunday, April 28, 2024
Homeಸುದ್ದಿಕರಾವಳಿಯಶ್ ಜೊತೆ ‘ಟಾಕ್ಸಿಕ್’ನಲ್ಲಿ ನಟಿಸಬೇಕಾ? ಇಲ್ಲಿದೆ ಅವಕಾಶ

ಯಶ್ ಜೊತೆ ‘ಟಾಕ್ಸಿಕ್’ನಲ್ಲಿ ನಟಿಸಬೇಕಾ? ಇಲ್ಲಿದೆ ಅವಕಾಶ

ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್. ಇತ್ತೀಚೆಗೆ ಈ ಸಿನಿಮಾದ ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ರಾಕಿ ಭಾಯ್ ಯಶ್ ಚರ್ಚಿಸುತ್ತಾ ಸಾಗುತ್ತಿರುವ ಫೋಟೋವೊಂದು ಸಿಕ್ಕಾಪಟ್ಟೆ ಆಗಿತ್ತು. ಟಾಕ್ಸಿಕ್ ಸಿನಿಮಾ ಚಿತ್ರೀಕರಣಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಏಪ್ರಿಲ್ ತಿಂಗಳಲ್ಲಿ ಟಾಕ್ಸಿಕ್ ಶೂಟಿಂಗ್ ಆರಂಭಗೊಳ್ಳಲಿದೆ. ಈ ಬೆನ್ನಲ್ಲೇ ಫ್ಯಾನ್ಸ್ಗೆ ಟಾಕ್ಸಿಕ್ ಚಿತ್ರತಂಡ ಸಿಹಿ ಸುದ್ದಿಯೊಂದು ನೀಡಿದೆ.

ನಟ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ನಟಿಸುವ ಅವಕಾಶವನ್ನು ಟಾಕ್ಸಿಕ್ ಟೀಮ್ ಕಲ್ಪಿಸಿ ಕೊಡುತ್ತಿದೆ. ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಕೆಲಸಗಳು ಶುರುವಾಗಿರುವ ಹಿನ್ನೆಲೆಯಲ್ಲಿ ಕಲಾವಿದರ ಆಯ್ಕೆ ಪ್ರಕ್ರಿಯೆಗೆ ಚಿತ್ರತಂಡ ತಯಾರಿ ನಡೆಸುತ್ತಿದೆ. KVN ಟ್ವೀಟರ್ ಖಾತೆಯಲ್ಲಿ ಆಡಿಷನ್ ಪೋಸ್ಟ್ವೊಂದನ್ನು ಶೇರ್ ಮಾಡಿಕೊಳ್ಳಲಾಗಿದೆ. 25 ರಿಂದ 75 ವರ್ಷದ ಪುರುಷರಿಗೆ ಆದ್ಯತೆ. 12 ರಿಂದ 16 ವಯಸ್ಸಿನ ಮಕ್ಕಳಿಗೆ ಅವಕಾಶ ಇದೆ. 23 ರಿಂದ 65 ವಯಸ್ಸಿನ ಮಹಿಳೆಯರು ಆಡಿಷನ್ ಕೊಡಬಹುದು. ಮಾರ್ಚ್ 25ರಂದು ತಮ್ಮ ಬಗ್ಗೆ ಯಾವುದೇ ಭಾಷೆಯಲ್ಲಾದರೂ ಒಂದು ನಿಮಿಷದ ಕಿರು ಪರಿಚಯದ ವಿಡಿಯೋಗಳನ್ನು ಕಳಿಸಲು ಕೊನೆಯ ದಿನ ಎಂದು ಟಾಕ್ಸಿಕ್ ತಂಡ ಕಾಸ್ಟಿಂಗ್ ಕಾಲ್ ಕರೆದಿದೆ.

ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಟ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಅಭಿನಯಿಸಲು ಸಾಕಷ್ಟು ಫ್ಯಾನ್ಸ್ ವಿಡಿಯೋಗಳನ್ನು ಟಾಕ್ಸಿಕ್ ಟೀಮ್ಗೆ ಕಳಿಸುತ್ತಿದ್ದಾರೆ. ಇನ್ನು, ಟಾಕ್ಸಿಕ್ಸ್ ಸಿನಿಮಾಗೆ ನಿರ್ದೇಶಕಿ ಗೀತು ಮೋಹನ್ ದಾಸ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಯಶ್ ಮತ್ತು ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್ 10ಕ್ಕೆ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ.

ಇತ್ತೀಚಿಗೆ ಟಾಕ್ಸಿಕ್ ಸಿನಿಮಾ ತಂಡದಿಂದ ಕೇಳಿ ಬಂದ ಸುದ್ದಿಯ ಪ್ರಕಾರ ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ಕರೀನಾ ಕಪೂರ್ ಮಾತ್ರವಲ್ಲ ಬಹುಭಾಷಾ ನಟಿ ಶ್ರುತಿ ಹಾಸನ್ ಕೂಡ ಟಾಕ್ಸಿಕ್ ಸಿನಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದರು. ಇದೀಗ ಟಾಕ್ಸಿಕ್ ಸಿನಿಮಾಗೆ ಕಿಯಾರ್ ಅಡ್ವಾಣಿ ಬರಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸದ್ಯ ಮುಂದಿನ ದಿನಗಳಲ್ಲಿ ಯಶ್ ಜತೆ ಯಾವ ನಟಿ ಅಭಿನಯಿಸಲಿದ್ದಾರೆ ಎಂದು ಕಾದುನೋಡಬೇಕಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News