ಕಾರ್ಕಳದ ಯೂಟ್ಯೂಬರ್ ‘ಅಯ್ಯೋ ಶ್ರದ್ಧಾ’ಗೆ ಅತ್ಯಂತ ಸೃಜನಶೀಲ ಕ್ರಿಯೇಟರ್ ಪ್ರಶಸ್ತಿ

ಕಾರ್ಕಳ, ಮಾ 09: ಅಯ್ಯೋ ಶ್ರದ್ಧಾ ಎಂದೇ ಖ್ಯಾತಿಯ ಯೂಟ್ಯೂಬ್ ಚಾನೆಲ್‌ನ ಕಾರ್ಕಳ ತಾಲೂಕಿನ ಬಜಗೋಳಿ ಸುಶೀಲಾ ಫಾರ್ಮ್ ಎಸ್ಟೇಟ್‌ನ ಶ್ರದ್ಧಾ ಜೈನ್(42) ಅವರಿಗೆ ಮಹಿಳಾ ವಿಭಾಗದಲ್ಲಿ ಅತ್ಯಂತ ಸೃಜನಶೀಲ ಕ್ರಿಯೇಟರ್ ಎನ್ನುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ರಾಷ್ಟ್ರ ರಾಜಧಾನಿಯ ಭಾರತ್ ಮಂಟಪದಲ್ಲಿ ಶ್ರದ್ಧಾ ಜೈನ್ ಅವರಿಗೆ ಮಹಿಳಾ ವಿಭಾಗದಲ್ಲಿ ಅತ್ಯಂತ ಸೃಜನಶೀಲ ಕ್ರಿಯೇಟರ್ ಎನ್ನುವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಶ್ರದ್ಧಾ ಅವರನ್ನು ವೇದಿಕೆಗೆ ಸ್ವಾಗತಿಸುವ ವೇಳೆ ಸ್ವತಃ ನರೇಂದ್ರ ಮೋದಿ ಅವರು ಅಯ್ಯೋ ಎಂದು ಹೇಳಿ ವೇದಿಕೆಗೆ ಬರಮಾಡಿ ಕೊಂಡರು. ಬಳಿಕ ಮಾತನಾಡಿದ ಶ್ರದ್ಧಾ ಎಷ್ಟೇ ಒತ್ತಡ ಪರಿಸ್ಥಿತಿ ಇದ್ದರೂ, ನಾವು ಭಾರತೀಯರು ನಗುವ ಮಾರ್ಗವನ್ನು ಕಂಡುಕೊಳ್ಳುತ್ತಲೇ ಇರುತ್ತೇವೆ ಎಂದರು.

ಮೊಟ್ಟಮೊದಲ ಬಾರಿಗೆ ಯೂಟ್ಯೂಬ್, ಇನ್ಸ್‌ಟಾಗ್ರಾಮ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಜನಪರ ಕಂಟೆಂಟ್‌ಗಳ ಮೂಲಕ ಪ್ರಖ್ಯಾತರಾಗಿರುವ ವ್ಯಕ್ತಿಗಳಿಗೆ ನ್ಯಾಷನಲ್ ಕ್ರಿಯೇಟರ್ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ವಿತರಣೆ ಮಾಡಿದರು.

You cannot copy content from Baravanige News

Scroll to Top