ಬ್ರಹ್ಮಾವರ: ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಲೋಕಾರ್ಪಣೆ

ಬ್ರಹ್ಮಾವರ, ಮಾ. 03: ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಲೋಕಾರ್ಪಣೆ, ಗುರುಗಳ ಮೂರ್ತಿ ಪ್ರತಿಷ್ಠೆ ಕಾರ್ಯಕ್ರಮ ಮಾ. 2 ಹಾಗೂ 3 ರಂದು ಜರಗಿತು.
ಮಾ. 3ರಂದು ನಾರಾಯಣ ಗುರು ಸಭಾಭವನದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಾವರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ ವಹಿಸಿದ್ದರು.

ಸೋಲೂರು ಮಠದ ಆರ್ಯ ಈಡಿಗ ಸಮಾಜದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಡಾ| ಜಿ. ಶಂಕರ್, ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ , ಶಾಸಕ ಬಿ.ಕೆ. ಹರಿಪ್ರಸಾದ್, ಉದ್ಯಮಿ ಗೋವಿಂದ ಬಾಬು ಪೂಜಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜನಾರ್ದನ ತೋನ್ಸೆ ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಬಾಬು ಶಿವ ಪೂಜಾರಿ, ಮೂಲ್ಕಿ ಬಿಲ್ಲವ ಮಹಾಮಂಡಳಿಯ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಸತ್ಯಜಿತ್ ಸುರತ್ಕಲ್, ಶ್ಯಾಮರಾಜ್ ಪೂಜಾರಿ ಮಾಯಾಡಿ, ಉಡುಪಿ ಜಿಲ್ಲಾ ಬಿಲ್ಲವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ, ಎನ್.ಟಿ. ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ವಸಂತಿ ಸತೀಶ್ ಪೂಜಾರಿ, ಯುವ ಘಟಕದ ಅಧ್ಯಕ್ಷ ಉಮೇಶ್ ಪೂಜಾರಿ, ಬ್ರಹ್ಮಾವರ ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಶೇಖರ್ ಕೋಟ್ಯಾನ್, ಖಚಾoಚಿ ಮೋಹನ ಪೂಜಾರಿ,ಉಪಾಧ್ಯಕ್ಷರಾದ ನರಸಿಂಹ ಪೂಜಾರಿ, ರಾಘು ಪೂಜಾರಿ,ರಾಜು ಪೂಜಾರಿ, ಅಶೋಕ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಶಿಕ್ಷಕರಾದ ದಯಾನಂದ ಉಪ್ಪೂರು ಹಾಗೂ ಬಾಲಕೃಷ್ಣ ಹಾರಾಡಿ ನಿರೂಪಿಸಿದರು. ಶೇಖರ ಪೂಜಾರಿ ಬ್ರಹ್ಮಾವರ ವಂದಿಸಿದರು.

You cannot copy content from Baravanige News

Scroll to Top