ಬೆಂಗಳೂರು : ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ : ಹಲವರಿಗೆ ಗಂಭೀರ ಗಾಯ

ಬೆಂಗಳೂರು : ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ವಸ್ತು ಸ್ಫೋಟವಾಗಿದೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ.

ಸ್ಫೋಟದ ತೀವ್ರತೆಗೆ ರಾಮೇಶ್ವರಂ ಕೆಫೆ ಹಾನಿಯಾಗಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಪೋಟವಾಗುತ್ತಿದ್ದಂತೆಯೇ ಜನರು ಭಯಭೀತರಾಗಿ ಓಡಿಡಾಡಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.

ನಿಗೂಢ ಸ್ಫೋಟದ ವೇಳೆ ಭಾರಿ ಪ್ರಮಾಣದ ಶಬ್ಧವಾಗಿದೆ. ಇದರಿಂದ ಜನರು ಒಂದು ಕ್ಷಣ ಭಯಭೀತರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿ ಶಾಮಕದಳ ಆಗಮಿಸಿದ್ದು, ಬೆಂಕಿ ನಂದಿಸಿದ್ದಾರೆ. ಇನ್ನು ಈ ಸ್ಪೋಟದಲ್ಲಿ 5ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಈ ಪೈಕಿ ಮಹಿಳೆಗೆ ಗಾಯವಾಗಿದೆ.

ಸಿಲಿಂಡರ್‌ ಅಥವಾ ಬಾಯ್ಲರ್‌ ಸ್ಫೋಟ ಕೂಡ ಆಗಿರಬಹುದೆಂದು ಎಂದು ಶಂಕಿಸಲಾಗಿತ್ತು. ಆದ್ರೆ, ಸ್ಫೋಟದಲ್ಲಿ ಕೆಲ ಐಡಿ ಕಾರ್ಡ್ಗಳು ದೊರೆತಿವೆ. ಇನ್ನು ಬ್ಲಾಸ್ಟ್ ನಡೆದ ಸ್ಥಳದ ಸಮೀಪದಲ್ಲೇ ಒಂದು ಬ್ಯಾಟರಿ ಪತ್ತೆಯಾಗಿದೆ. ಅಲ್ಲದೇ ಹೋಟೆಲ್ಗೆ ಗ್ರಾಹಕರೊಬ್ಬರ ಬ್ಯಾಗ್ ಸುಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ.  ಈ ಹಿನ್ನೆಲೆಯಲ್ಲಿ ಹಲವು ಅ ಅನುಮಾನಗಳು ವ್ಯಕ್ತವಾಗಿವೆ.  ಈ ಹಿನ್ನೆಲೆಯಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳು ಸಹ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಎಸಿಪಿ ರೀನಾ ಸುವರ್ಣ ಮತ್ತು ಮಾರತ್ತಹಳ್ಳಿ ಪೊಲೀಸರು ಸಹ ಸ್ಥಳಕ್ಕೆ ಬಂದಿದ್ದು, ಸುಟ್ಟ ಸ್ಥಿತಿಯಲ್ಲಿರುವ ಬ್ಯಾಗ್ ಹಾಗೂ ಸ್ಥಳದಲ್ಲಿ ಸಿಕ್ಕ ಐಡಿ ಕಾರ್ಡ್ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಇನ್ನು ಹೋಟೆಲ್ನ ಸಿಸಿಟಿವಿಗಳನ್ನು ಸಹ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಸ್ಫೋಟದ ಹಿಂದೆ ಕಿಡಿಗೇಡಿಗಳ ಕೃತ್ಯ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಆಗಮಿಸಿದ್ದಾರೆ. ಅಗತ್ಯ ಉಪಕರಣಗಳ ಜೊತೆ ರಾಮೇಶ್ವರಂ ಕೆಫೆಗೆ ಬಂದಿರುವ ಎಫ್.ಎಸ್.ಎಲ್ ತಂಡ ಪರಿಶೀಲನೆ ನಡೆಸಿದೆ.

You cannot copy content from Baravanige News

Scroll to Top