ಕಾಪು: ತಾಲೂಕು ಭೂನ್ಯಾಯ ಮಂಡಳಿಗೆ ನಾಲ್ವರು ಸದಸ್ಯರ ನೇಮಕ

ಕಾಪು: ತಾಲೂಕು ಭೂನ್ಯಾಯ ಮಂಡಳಿಗೆ ಸರಕಾರ ನಾಲ್ವರನ್ನು ಸದಸ್ಯರನ್ನಾಗಿ ನೇಮಿಸಿ ನಾಮ ನಿರ್ದೇಶನ ಮಾಡಿದೆ.

ರೋಹನ್ ಕುಮಾರ್ ಕುತ್ಯಾರು, ಮೆಲ್ವಿನ್ ಡಿ’ಸೋಜಾ, ರಮೀಜ್ ಹುಸೈನ್ ಪಡುಬಿದ್ರಿ ಮತ್ತು ರಾಘವ ಕೋಟ್ಯಾನ್ ಬೆಳ್ಳೆ ನೇಮಿಸಿ ಸರಕಾರ ಆದೇಶ ಹೊರಡಿಸಿದೆ.

ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರನ್ನು ಮಂಡಳಿಯ ಅಧ್ಯಕ್ಷರನ್ನಾಗಿ, ಕಾಪು ತಾಲೂಕು ತಹಶೀಲ್ದಾರ್‌ರವರನ್ನು ಸದಸ್ಯ ಕಾರ್ಯದರ್ಶಿಯಾಗಿ ರಾಜ್ಯಪಾಲರ ಆಜ್ಞಾನುಸಾರ ಮುಂದಿನ ಆದೇಶದವರೆಗೆ ನೇಮಿಸಿ ನಾಮನಿರ್ದೇಶನ ಗೊಳಿಸಲಾಗಿದೆ ಎಂದು ಕಂದಾಯ ಇಲಾಖೆಯ ಸರಕಾರದ ಆಧೀನ ಕಾರ್ಯದರ್ಶಿ ಗೌರಮ್ಮ ಆರ್‌. ಆದೇಶದಲ್ಲಿ ತಿಳಿಸಿದ್ದಾರೆ

You cannot copy content from Baravanige News

Scroll to Top