Tuesday, April 16, 2024
Homeಸುದ್ದಿಕರಾವಳಿಕೊಂಕಣ್ ರೈಲ್ವೇಯಲ್ಲಿ ಟಿಕೆಟ್‌ ರಹಿತ ಪ್ರಯಾಣ : 5 ತಿಂಗಳಲ್ಲಿ 6.79 ಕೋ.ರೂ. ದಂಡ

ಕೊಂಕಣ್ ರೈಲ್ವೇಯಲ್ಲಿ ಟಿಕೆಟ್‌ ರಹಿತ ಪ್ರಯಾಣ : 5 ತಿಂಗಳಲ್ಲಿ 6.79 ಕೋ.ರೂ. ದಂಡ

ಉಡುಪಿ : ರೈಲ್ವೇ ಸುರಕ್ಷೆಗೆ ಕೇಂದ್ರ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇದೇ ಸಂದರ್ಭದಲ್ಲಿ ಕೆಲವೊಂದು ಬಿಗಿ ಕ್ರಮಗಳನ್ನು ತೆಗೆದು ಕೊಳ್ಳಲಾಗುತ್ತಿದೆ. ಪರಿಣಾಮ ಕೊಂಕಣ ರೈಲ್ವೇಯಲ್ಲಿ 5 ತಿಂಗಳಲ್ಲಿ ದಂಡದ ಮೂಲಕವೇ 6.79 ಕೋ.ರೂ.ಗಳನ್ನು ಪ್ರಯಾಣಿಕರಿಂದ ವಸೂಲು ಮಾಡಲಾಗಿದೆ.

5 ತಿಂಗಳಲ್ಲಿ 32,902 ಮಂದಿ ಟಿಕೆಟ್‌ ರಹಿತ ಪ್ರಯಾಣ ಮಾಡಿದ್ದು, ಅವರಿಂದ 6.79 ಕೋ.ರೂ. ದಂಡ ವಸೂಲು ಮಾಡಲಾಗಿದೆ. 2024ರ ಜನವರಿ ಯಲ್ಲಿ ಅತ್ಯಧಿಕ 9,548 ಪ್ರಯಾಣಿಕರು 2,17,97,102 ರೂ. ಪಾವತಿಸಿದ್ದಾರೆ. ಸಿಕ್ಕಿಬಿದ್ದ ಪ್ರಯಾಣಿಕರು ಟಿಕೆಟ್‌ ಹಣದ ಜತೆಗೆ ಹೆಚ್ಚುವರಿ 250 ರೂ.ಪಾವತಿಸಬೇಕಿದೆ.

ಶಿಕ್ಷೆ ಏನು?


ರೈಲ್ವೇ ಟಿಸಿಗೆ ದಂಡ ಪಾವತಿಸಲು ನಿರಾಕರಿಸಿದವರನ್ನು ಆರ್‌ಪಿಎಫ್ಗೆ ಒಪ್ಪಿಸಿ ರೈಲ್ವೇ ಕಾಯ್ದೆ ಸೆಕ್ಷನ್‌ 137ರ ಪ್ರಕಾರ ಪ್ರಕರಣ ದಾಖಲಿಸ ಲಾಗುತ್ತದೆ. ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಿದರೆ ಗರಿಷ್ಠ 1,000 ರೂ. ದಂಡ ವಿಧಿಸಬಹುದು. ಅದನ್ನೂ ಪಾವತಿಸಲು ನಿರಾಕರಿಸಿದರೆ ಗರಿಷ್ಠ 6 ತಿಂಗಳು ಜೈಲು ಶಿಕ್ಷೆ ವಿಧಿಸಬಹುದು. ರೈಲ್ವೇ ಪ್ಲಾಟ್‌ ಫಾರಂನೊಳಗೆ ಹೋಗಲು 10 ರೂ. ಶುಲ್ಕ ವಿಧಿಸಲಾಗುತ್ತಿದೆ. ಕೆಲವರು ಇದನ್ನೂ ಉಲ್ಲಂ ಸಿ ಹೋಗುವಂತಹ ಘಟನೆಗಳೂ ನಡೆಯುತ್ತಿವೆ ಎನ್ನುತ್ತಾರೆ ರೈಲ್ವೇ ಸಿಬಂದಿ.


ನಿಯಮಿತ ತಪಾಸಣೆ


ಪ್ರತೀ ಬೋಗಿಯಲ್ಲಿಯೂ ಟಿಸಿಗಳು ನಿಯಮಿತವಾಗಿ ಟಿಕೆಟ್‌ ಪರಿ  ಶೀಲನೆ ನಡೆಸಿದರೂ ಅವರ ಕಣ್ತಪ್ಪಿಸಿ ಒಳಪ್ರವೇಶಿಸುವವರೂ ಇದ್ದಾರೆ. ಸಿಕ್ಕಿಬೀಳುವವರ ಪೈಕಿ ಬಿಹಾರ, ಮಹಾರಾಷ್ಟ್ರ, ಗೋವಾ ಸಹಿತ ಅನ್ಯ ರಾಜ್ಯ, ಜಿಲ್ಲೆಯವರೇ ಹೆಚ್ಚು. ಸ್ಥಳದಲ್ಲಿಯೇ ದಂಡ ವಸೂಲು ಮಾಡುವ ಅಧಿಕಾರವೂ ಟಿಸಿಗಳಿಗೆ ಇರುವು  ದರಿಂದ ಟಿಕೆಟ್‌ ರಹಿತವಾಗಿ ಪ್ರಯಾಣ ಮಾಡುವವರು ಅಲ್ಲಿಯೇ ಹಣ ಪಾವತಿಸಿದರೆ ಸಮಸ್ಯೆಯಾಗದು. ಇಲ್ಲದಿದ್ದರೆ ಕೋರ್ಟ್‌, ಕಚೇರಿ ಎಂದು ಅಲೆಯಬೇಕಾಗುತ್ತದೆ.

ಮಾಹಿತಿ ನೀಡಬಹುದು


ಟಿಕೆಟ್‌ ರಹಿತವಾಗಿ ಪ್ರಯಾಣಿಸುವವರು ರೈಲಿನೊಳಗೆ ದುಷ್ಕೃತ್ಯ ಎಸಗುವ ಸಾಧ್ಯತೆಯೂ ಇರುತ್ತವೆ. ಇಂತಹ ಸಂದರ್ಭದಲ್ಲಿ ಅವರನ್ನು ಪತ್ತೆ ಹಚ್ಚುವುದೂ ಕಷ್ಟ. ಈ ಕಾರಣಕ್ಕೆ ಸಹಪ್ರಯಾಣಿಕರು ಕೂಡ ಈ ಬಗ್ಗೆ ಜಾಗರೂಕರಾಗುವ ಜತೆಗೆ ಅನುಮಾನಸ್ಪದ ವ್ಯಕ್ತಿಗಳು ಸಂಚಾರ ಮಾಡುತ್ತಿರುವುದು ಕಂಡುಬಂದಲ್ಲಿ ಟಿಸಿ ಅಥವಾ ಸಹಾಯವಾಣಿ ಸಂಖ್ಯೆಗೆ ತಿಳಿಸಬಹುದು. ಈಗಾಗಲೇ ಹಲವಾರು ಮಂದಿ ಟಿಕೆಟ್‌ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರಿಂದ ದಂಡ ವಸೂಲು ಮಾಡಲಾಗಿದೆ ಎಂದು ರೈಲ್ವೇ ಪೊಲೀಸರೊಬ್ಬರು ಮಾಹಿತಿ ನೀಡಿದರು.

ಟಿಕೆಟ್‌ ಪಡೆದುಕೊಂಡೇ ಪ್ರಯಾಣ ಮಾಡಬೇಕು. ಟಿಕೆಟ್‌ ತಪಾಸಣೆ ದಿನನಿತ್ಯ ನಡೆಸಲಾಗುತ್ತಿದೆ. ಸಿಕ್ಕಿಬಿದ್ದ ಪ್ರಯಾಣಿಕರಿಗೆ ಟಿಕೆಟ್‌ನೊಂದಿಗೆ ಹೆಚ್ಚುವರಿ ದಂಡ ವಿಧಿಸಲಾಗುವುದು.
-ಸುಧಾ ಕೃಷ್ಣಮೂರ್ತಿ,
ಪಿಆರ್‌ಒ, ಕೊಂಕಣ ರೈಲ್ವೇ

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News