Tuesday, April 16, 2024
Homeಸುದ್ದಿರಾಷ್ಟ್ರೀಯಪರೀಕ್ಷೆ ಬರೆಯಲು 40 ಗಂಟೆ ನಿದ್ದೆ ಬಾರದ ಮಾತ್ರೆ ನುಂಗಿದ 10ನೇ ತರಗತಿ ವಿದ್ಯಾರ್ಥಿನಿ :...

ಪರೀಕ್ಷೆ ಬರೆಯಲು 40 ಗಂಟೆ ನಿದ್ದೆ ಬಾರದ ಮಾತ್ರೆ ನುಂಗಿದ 10ನೇ ತರಗತಿ ವಿದ್ಯಾರ್ಥಿನಿ : ಆಮೇಲೆ ಏನಾಯ್ತು?

ಲಕ್ನೋ : ಶಾಲಾ ಮಕ್ಕಳಿಗೆ ಈಗಂತೂ ಪರೀಕ್ಷಾ ಸಮಯ ಶುರುವಾಗಿದೆ. ಪರೀಕ್ಷೆಯ ತಯಾರಿಯಲ್ಲಿರೋ ಮಕ್ಕಳು ಒತ್ತಡದಲ್ಲಿ ಇರುತ್ತಾರೆ. ಪೋಷಕರು ಸಹ ಮಕ್ಕಳು ಹೆಚ್ಚು ಸಮಯ ಓದಬೇಕು ಅನ್ನೋ ಒತ್ತಡ ಹಾಕುತ್ತಾರೆ. ಆದರೆ ಈ ಒತ್ತಡದಲ್ಲಿ ಓದುವಾಗ 40 ಗಂಟೆ ನಿದ್ದೆ ಬಾರದ ಮಾತ್ರೆ ನುಂಗಿ ಅನಾಹುತ ಮಾಡಿಕೊಂಡಿರೋ ಆಘಾತಕಾರಿ ಘಟನೆಯೊಂದು ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ಕಷ್ಟಪಟ್ಟು ಓದುತ್ತಿದ್ದ 10ನೇ ತರಗತಿ ಈಗ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಉತ್ತರಪ್ರದೇಶದ ಪ್ರಜಕ್ತ ಸ್ವರೂಪ್ ಎಂಬ ವಿದ್ಯಾರ್ಥಿನಿ ಈ ಸಾಹಸಕ್ಕೆ ಕೈ ಹಾಕಿ ಅನಾಹುತ ಮಾಡಿಕೊಂಡಿದ್ದಾಳೆ. ಪ್ರಜಕ್ತ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಬೋರ್ಡ್‌ ಪರೀಕ್ಷೆ ಬರೆಯಲು ಹಗಲು ರಾತ್ರಿ ಓದುತ್ತಿದ್ದಳು. ಈಕೆಯ ತಾಯಿ ಕೂಡ ಮಗಳು ಚೆನ್ನಾಗಿ ಓದಬೇಕು ಅಂತ ಗಂಟೆಗೊಮ್ಮೆ ಕಾಫಿ ಮಾಡಿಕೊಟ್ಟು ಸಹಾಯ ಮಾಡುತ್ತಿದ್ದರು. ಪರೀಕ್ಷೆ ಹತ್ತಿರ ಬಂದಾಗ ಒಂದು ದಿನ ಪ್ರಜಕ್ತ ಸ್ವರೂಪ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಿದ್ಯಾರ್ಥಿನಿ ಪ್ರಜಕ್ತ ಸ್ವರೂಪ್ ಆಸ್ಪತ್ರೆಗೆ ದಾಖಲಾದ ಮೇಲೆ ಅಸಲಿ ವಿಷಯ ಗೊತ್ತಾಗಿದೆ. ಪ್ರಜಕ್ತ ಓದುತ್ತಿದ್ದ ರೂಮ್‌ನಲ್ಲಿ ನಿದ್ದೆ ಬಾರದ ಮಾತ್ರೆಗಳು ಸಿಕ್ಕಿದ್ದು ಪೋಷಕರು ಬೆಚ್ಚಿ ಬಿದ್ದಿದ್ದಾರೆ. ಆ ಮಾತ್ರೆಗಳನ್ನು ವೈದ್ಯರ ಪರೀಕ್ಷೆಗೆ ಒಪ್ಪಿಸಿದಾಗ ಅವುಗಳು ನಿದ್ರೆ ಬಾರದಕ್ಕೆ ತೆಗೆದುಕೊಳ್ಳುವ ಮಾತ್ರೆ ಅನ್ನೋದು ಗೊತ್ತಾಗಿದೆ.

ಯಾವುದು ಆ ಮಾತ್ರೆ? ಎಲ್ಲಿ ಸಿಗುತ್ತವೆ?
ನಿದ್ದೆಯಿಂದ ತಪ್ಪಿಸಿಕೊಳ್ಳುವ ಈ ಮಾತ್ರೆ ಬಹಳ ಅಪಾಯಕಾರಿಯಾದದ್ದು. ಇದನ್ನು ಹೆಚ್ಚಾಗಿ ಡ್ರಗ್ಸ್‌ ವ್ಯಸನಿಗಳು ಬಳಸುತ್ತಾರೆ. ಒಂದು ಮಾತ್ರೆ ಸೇವಿಸಿದರೆ 40 ಗಂಟೆಗಳ ಕಾಲ ನಿದ್ರೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ. ಈ ಮಾತ್ರೆಯನ್ನು ಮೋಡಾಫಿನಿಲ್, ಚುನಿಯಾ ಮತ್ತು ಮೀಥಿ ಅನ್ನೋ ಹೆಸರಿನಿಂದ ಕರೆಯಲಾಗುತ್ತೆ. ಈ ಮಾತ್ರೆಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ನಿದ್ದೆ ಬಾರದ ಈ ಮಾತ್ರೆಗಳನ್ನು ಬ್ಯಾಂಕಾಕ್ ಸೇರಿದಂತೆ ವಿದೇಶದಲ್ಲಿ ಹೆಚ್ಚು ಹೆಚ್ಚು ಬಳಕೆ ಮಾಡಲಾಗುತ್ತದೆ. ಓವರ್‌ಡೋಸ್‌ ಕೆಫೀನ್ ಅಂಶ ಇದ್ದು, ಇದರಲ್ಲಿ ಸೈಡ್‌ ಎಫೆಕ್ಟ್ ಆಗುವ ಸಾಧ್ಯತೆ ಹೆಚ್ಚಾಗಿದೆ. ನಿದ್ದೆ ಬಾರದ ಮಾತ್ರೆಗಳನ್ನು ಸೇವಿಸುವುದರಿಂದ ನರಗಳ ಊತ ಹಾಗೂ ರಕ್ತ ಹೆಪ್ಪುಗಟ್ಟುವಿಕೆ ಕಾಣಿಸಿಕೊಳ್ಳುತ್ತದೆ. ಇದನ್ನು ಸೇವಿಸುವವರು ಮೆದುಳಿನ ಶಸ್ತ್ರಚಿಕಿತ್ಸೆಗೂ ಒಳಗಾದ ನಿದರ್ಶನಗಳಿವೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News