ಸಾಮಾಜಿಕ ಜಾಲತಾಣಗಳಲ್ಲಿ ಹೆಚ್‌‌ಎಸ್‌‌ಆರ್‌‌ಪಿ ನಕಲಿ ಲಿಂಕ್ – ಎಚ್ಚರಿಕೆ ವಹಿಸಲು ಸೂಚನೆ

ಬೆಂಗಳೂರು, ಫೆ 19: ಸಾಮಾಜಿಕ ಜಾಲತಾಣಗಳಲ್ಲಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್(HSRP) ನೋಂದಣಿ ಸಂಬಂಧ ನಕಲಿ ಲಿಂಕ್‍ಗಳು ಶೇರ್ ಆಗುತ್ತಿರುವ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ದಕ್ಷಿಣ ವಲಯದ ಸಂಚಾರ ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.

ಈ ಕುರಿತು ನಗರದಲ್ಲಿ ಮಾಹಿತಿ ಅವರು, HSRP ನೋಂದಣಿಗೆ ಸಂಬಂಧಿಸಿದಂತೆ ಅಧಿಕೃತ ಜಾಲತಾಣಗಳ ಮೂಲಕ ಮಾತ್ರ ಅರ್ಜಿ ಹಾಕಬೇಕು. ಒಮ್ಮೊಮ್ಮೆ ವೆಬ್‍ಸೈಟ್ ಸರಿಯಾಗಿದೆಯಾ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಹಣ ಪಾವತಿಸಬೇಕು. ಸಮಸ್ಯೆ ಕಂಡು ಬಂದರೆ ಕೂಡಲೇ ಸೈಬರ್ ಕ್ರೈಂ ಠಾಣೆಗೆ ದೂರು ನೀಡಬೇಕು ಎಂದರು.

ಇನ್ನು HSRP ನೋಂದಣಿ ಮಾಡಿಕೊಳ್ಳುವ ಭರದಲ್ಲಿ ಸಾರ್ವಜನಿಕರು ನಕಲಿ ಲಿಂಕ್‍ಗಳ ಮೇಲೆ ಕ್ಲಿಕ್ ಮಾಡಿ ಮೋಸ ಹೋಗಬಾರದು. ಅಧಿಕೃತ ಲಿಂಕ್ ಒತ್ತಿ ನೋಂದಣಿ ಮಾಡಿಸಬೇಕು ಎಂದು ತಿಳಿಸಿದ್ದಾರೆ.

You cannot copy content from Baravanige News

Scroll to Top