‘ಓ ನಲ್ಲ, ನೀನಲ್ಲ, ಕರಿಮಣಿ ಮಾಲೀಕ ನೀನಲ್ಲ’ಎಂದ ಪತ್ನಿ : ನೊಂದ ಪತಿ ಆತ್ಮಹತ್ಯೆಗೆ ಶರಣು ಎಂದ ..!

ಚಾಮರಾಜನಗರ : ಕಳೆದ ಹಲವು ದಿನಗಳಿಂದ ಎಲ್ಲಾರ ಬಾಯಲ್ಲಿ ಬರೋದು ಈ ಹಾಡು.. ಓ ನಲ್ಲ.. ನೀನಲ್ಲ, ಕರಿಮಣಿ ಮಾಲೀಕ ನೀನಲ್ಲ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೆಂಡಿಂಗ್‌ನಲ್ಲಿದ್ದು ಯುವಕರೆಲ್ಲ ರೀಲ್ಸ್ ನಲ್ಲೆ ಪ್ರಚಾರಗಿಟ್ಟಿಸಿಕೊಂಡಿದಂತೂ ನಿಜ. ಆದ್ರೆ ರಿಯಲ್‌ ಸ್ಟಾರ್‌ ಉಪೇಂದ್ರ ನಟನೆಯ ಉಪೇಂದ್ರ ಸಿನಿಮಾದ ಹಾಡು ಇದೀಗ ಜೀವಕ್ಕೂ ಮುಳುವಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ಮಹಿಳೆಯೋರ್ವಳು ಓ ನಲ್ಲ.. ನೀನಲ್ಲ, ಕರಿಮಣಿ ಮಾಲೀಕ ನೀನಲ್ಲ  ಹಾಡಿಗೆ ರೀಲ್ಸ್ ಮಾಡಿದ್ದು ಇದರಿಂದ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ,

ಕುಮಾರ್ (33) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಕುಮಾರ್‌ ಪತ್ನಿ ರೂಪಾ ಎಂಬಾಕೆ ತನ್ನ ಸೋದರಮಾವ ಹಾಗೂ ಸಹೋದರಿ ಜತೆಗೆ ಸೇರಿ ಓ ನಲ್ಲ, ನೀನಲ್ಲ.. ಕರಿಮಣಿ ಮಾಲೀಕ ನೀನಲ್ಲ ಎಂಬ ಸಾಂಗ್‌ಗೆ ರೀಲ್ಸ್‌ ಮಾಡಿ, ಸೋಶಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿದ್ದಳು. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಊರಲ್ಲಿ ಕುಮಾರ್‌ನನ್ನು ಕೆಲವರು ಕಾಲೆಳೆದು ಯಾರಪ್ಪಾ ಕರಿಮಣಿ ಮಾಲೀಕ ಎಂದು ಹೀಯಾಳಿಸಿದ್ದಾರೆ,

ಪತ್ನಿಯ ಈ ರೀಲ್ಸ್ ನೋಡಿ ಕುಮಾರ್ನನ್ನು ಗೆಳೆಯರು ರೇಗಿಸಿದ್ದಾರೆ, ಈ ವಿಚಾರದ ಬಗ್ಗೆ ಕೋಪಗೊಂಡ ಕುಮಾರ್, ರೀಲ್ಸ್ ಮಾಡಿರುವುದನ್ನು ಪ್ರಶ್ನಿಸಿ ರೂಪ ಜೊತೆ ಗಲಾಟೆ ಮಾಡಿದ್ದಾರೆ.ಇದರಿಂದ ಮನನೊಂದು ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

You cannot copy content from Baravanige News

Scroll to Top