ಅಜೆಕಾರು: ರಸ್ತೆ ಕಾಮಗಾರಿಯ ವೇಳೆ ಸಿಮೆಂಟ್ ಮಿಕ್ಸರ್ ವಾಹನ ಡಿಕ್ಕಿ- ಸೂಪರ್‌‌ವೈಸರ್ ಮೃತ್ಯು

ಅಜೆಕಾರು ಫೆ.15: ರಸ್ತೆ ಕಾಮಗಾರಿಯ ಸಿಮೆಂಟ್ ಮಿಕ್ಸರ್ ವಾಹನವೊಂದು ಡಿಕ್ಕಿ ಹೊಡೆದು ಸೂಪರ್ ವೈಸರ್ ಮೃತಪಟ್ಟ ಘಟನೆ ಪಡುಕುಡೂರು ಗ್ರಾಮದಲ್ಲಿ ನಡೆದಿದೆ.

ಸೂಪರ್ ವೈಸರ್‌ ಭಾಷಿ ವೈ ಮೃತಪಟ್ಟವರು. 4 ದಿನ ಹಿಂದೆ ಪ್ರಾರಂಭಿಸಿದ ಪಡುಕುಡೂರು ಗ್ರಾಮದ ಕೊಡಮಣಿತ್ತಾಯ ದೇವಸ್ಥಾನವರೆಗಿನ ಮುಖ್ಯರಸ್ತೆಯ ಕಾಮಗಾರಿಯ ವೇಳೆ ನಿನ್ನೆ ಸಂಜೆ ಪಡುಕುಡೂರು ಗ್ರಾಮದ ಭದ್ರಕಾಳಿ ದೇವಸ್ಥಾನದ ಬಳಿ ರಸ್ತೆ ನಿರ್ಮಾಣ ಕಾಮಗಾರಿಗೆ ಬಳಸುತ್ತಿದ್ದ ನೋಂದಣಿಯಾಗದ ಹೊಸ ಸಿಮೆಂಟ್ ಮಿಕ್ಸರ್ ವಾಹನದ ಚಾಲಕ ಸಂಜು ಶರಣಪ್ಪ ಎಂಬಾತನು ವಾಹನವನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಹಿಂದಕ್ಕೆ ಚಲಾಯಿಸಿದ್ದನು. ಈ ವೇಳೆ ರಸ್ತೆಯಲ್ಲಿ ನಿಂತಿದ್ದ ಕಂಪನಿಯ ಸೂಪರವೈಸರ್‌ ಭಾಷಿ ವೈ ಎನ್ನುವವರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ವಾಹನದ ಚಕ್ರ ಅವರ ಮೇಲೆ ಹರಿದು ತೀವೃ ಗಾಯಗೊಂಡಿದ್ದ ಭಾಷಿ ಅವರನ್ನು ಕೂಡಲೇ ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಭಾಷಿ ವೈ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top