Tuesday, April 16, 2024
Homeಸುದ್ದಿಕರಾವಳಿಗೋಕರ್ಣ ಪ್ರವಾಸಕ್ಕೆ ಬಂದ ವಿದೇಶಿ ಮಹಿಳೆ ದಿಢೀರ್ ನಾಪತ್ತೆ ; ಹಲವು ಅನುಮಾನ!

ಗೋಕರ್ಣ ಪ್ರವಾಸಕ್ಕೆ ಬಂದ ವಿದೇಶಿ ಮಹಿಳೆ ದಿಢೀರ್ ನಾಪತ್ತೆ ; ಹಲವು ಅನುಮಾನ!

ಕಾರವಾರ: ಗೋಕರ್ಣ ಪ್ರವಾಸಕ್ಕೆ ಆಗಮಿಸಿದ್ದ ಜಪಾನ್ ಮೂಲದ ಮಹಿಳೆ ನಾಪತ್ತೆಯಾಗಿರೋ ಘಟನೆ ಕುಮಟಾ ತಾಲೂಕಿನ ಗೋಕರ್ಣದಲ್ಲಿ ನಡೆದಿದೆ.

ಎಮಿ ಯಮಾಝಕಿ (40) ನಾಪತ್ತೆಯಾದ ಜಪಾನ್ ಮೂಲದ ಪ್ರವಾಸಿ.

ನಾಪತ್ತೆಯಾದ ಮಹಿಳೆ ಫೆಬ್ರವರಿ 5ರಂದು ಗೋಕರ್ಣ ಬಂಗ್ಲೆಗುಡ್ಡೆ ನೇಚರ್ ಕಾಟೇಜ್‌ನಲ್ಲಿ ಪತಿ ಜೊತೆ ತಂಗಿದ್ದಳು. ಬೆಳಿಗ್ಗೆ 10:30ರ ವೇಳೆ ಕಾಟೇಜ್‌ನಿಂದ ಹೊರ ಹೋಗಿದ್ದಳು. ಆದರೆ ಆ ಮಹಿಳೆ ಮರಳಿ ಕಾಟೇಜ್ಗೆ ಬಂದಿಲ್ಲ. ಕಾಣೆಯಾದ ಮಹಿಳೆಯ ಪತಿ ದೈ ಯಮಾಝಕಿ ಗೋಕರ್ಣ ಪೋಲಿಸ್ ಠಾಣೆಗೆ ದೌಡಾಯಿಸಿ ದೂರು ನೀಡಿದ್ದಾರೆ.

ದೂರನ್ನು ದಾಖಲಿಸಿಕೊಂಡ ಗೋಕರ್ಣ ಪೊಲೀಸರು ನಾಪತ್ತೆಯಾದ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News