Sunday, September 8, 2024
Homeಸುದ್ದಿಟ್ರಕ್‌ನಿಂದ ಕೆಳಗೆ ಬಿದ್ದ ವ್ಯಕ್ತಿ ವಿಮಾನ ಡಿಕ್ಕಿ ಹೊಡೆದು ಸಾವು

ಟ್ರಕ್‌ನಿಂದ ಕೆಳಗೆ ಬಿದ್ದ ವ್ಯಕ್ತಿ ವಿಮಾನ ಡಿಕ್ಕಿ ಹೊಡೆದು ಸಾವು

ಹಾಂಗ್‌ ಕಾಂಗ್: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ, ವಿಮಾನ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಅಪರೂಪದ ಘಟನೆ ನಡೆದಿದೆ.

ಮೃತರ ಹೆಸರು ತಿಳಿದುಬಂದಿಲ್ಲ. ಇವರು ಜೋರ್ಡಾನ್‌ ಪ್ರಜೆ. ಹಾಂಗ್‌ ಕಾಂಗ್‌ನಲ್ಲಿ ಕೆಲಸ ಮಾಡುತ್ತಿದ್ದ. ಟವ್‌ ಟ್ರಕ್‌ ಚಲಾಯಿಸುತ್ತಿದ್ದ ವೇಳೆ ಕೆಳಗೆ ಬಿದ್ದಿದ್ದಾನೆ. ಈ ವೇಳೆ ವಿಮಾನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ.

ಹಾಂಗ್ ಕಾಂಗ್‌ನ ವಿಮಾನ ನಿಲ್ದಾಣ ಪ್ರಾಧಿಕಾರವು, ಈ ವ್ಯಕ್ತಿ ಗ್ರೌಂಡ್ ಸಪೋರ್ಟ್ ಮತ್ತು ನಿರ್ವಹಣಾ ಸಂಸ್ಥೆ ಚೀನಾ ಏರ್‌ಕ್ರಾಫ್ಟ್ ಸರ್ವಿಸಸ್‌ನಲ್ಲಿ ಉದ್ಯೋಗಿ ಎಂದು ಹೇಳಿದೆ. ಟ್ರಕ್‌ ಚಾಲನೆ ಮಾಡುವಾಗ ಈತ ಸೀಟ್‌ ಬೆಲ್ಟ್‌ ಹಾಕಿರಲಿಲ್ಲ ಎಂದು ಶಂಕಿಸಲಾಗಿದೆ.

ನಿಲ್ದಾಣದಲ್ಲಿ ವಿಮಾನ ಹಿಂದಕ್ಕೆ ಚಲಿಸುವಂತೆ ಮಾಡಲು ಟವ್‌ ಟ್ರಕ್‌ನ್ನು ಬಳಸುತ್ತಾರೆ. ಈ ಟ್ರಕ್‌ ಮೂಲಕ ವಿಮಾನ ಹಿಂದಕ್ಕೆ ಚಲಾಯಿಸುವಂತೆ ಮಾಡುವ ಸಿಬ್ಬಂದಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ವಿಮಾನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News