Sunday, September 8, 2024
Homeಸುದ್ದಿಪಣಂಬೂರು ಬೀಚ್‌‌ನಲ್ಲಿ ನೈತಿಕ ಗೂಂಡಾಗಿರಿ ಆರೋಪ - ನಾಲ್ವರ ಬಂಧನ

ಪಣಂಬೂರು ಬೀಚ್‌‌ನಲ್ಲಿ ನೈತಿಕ ಗೂಂಡಾಗಿರಿ ಆರೋಪ – ನಾಲ್ವರ ಬಂಧನ

ಮಂಗಳೂರು, ಫೆ 05: ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ನೈತಿಕ ಗೂಂಡಾಗಿರಿ ನಡೆದಿದ್ದು, ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಬೆಂಗಳೂರಿನ ಯುವತಿ ಪಣಂಬೂರು ಠಾಣೆಗೆ ದೂರು ನೀಡಿದ್ದು ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಬಂಟ್ವಾಳ ಪಿಲಾತಬೆಟ್ಟು ನಿವಾಸಿ ಪ್ರಶಾಂತ ಭಂಡಾರಿ (38), ಬೆಳ್ತಂಗಡಿ ಕರಾಯ ನಿವಾಸಿ ಉಮೇಶ್ (23), ಬೆಳ್ತಂಗಡಿ ಪುತ್ತಿಲ ನಿವಾಸಿ ಸುಧೀರ್ (26), ಬೆಳ್ತಂಗಡಿ ಮಚ್ಚಿ‌ನ ನಿವಾಸಿ ಕೀರ್ತನ್ ಪೂಜಾರಿ (20) ಎಂದು ಗುರುತಿಸಲಾಗಿದೆ.

ಯುವಕ ಮತ್ತು ಯುವತಿ ಜೊತೆಗಿದ್ದಾಗ ಅವರನ್ನು ತಡೆದ ಯುವಕರು ಪ್ರಶ್ನಿಸಿದ್ದು ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿ ಡಿಯೋ ಮಾಡಿದ್ದಾರೆ. ‌ಆ ಬಳಿಕ ಪಣಂಬೂರು ಪೊಲೀಸರು ಸ್ಥಳಕ್ಕಾಗಮಿಸಿ, ಪರಿಸ್ಥಿತಿ ತಿಳಿಗೊಳಿಸಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಯುವತಿ ನೀಡಿದ ದೂರಿನಲ್ಲಿ, ಮಲ್ಪೆಗೆ ತೆರಳುತ್ತಿದ್ದಾಗ ಪರಿಚಯದ ಯುವಕ ಸಿಕ್ಕಿದ್ದು ಪಣಂಬೂರು ಬೀಚ್ ಗೆ ಭೇಟಿಯಾಗಿದ್ದೆ. ಆತನಿಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ಬಂದಿದ್ದರಿಂದ ಅಭಿನಂದಿಸಲು ಹೋಗಿದ್ದೆ. ನಾವು ಜೊತೆಗೆ ಇದ್ದುದಕ್ಕೆ ಯುವಕರು ಬೈದು ಅಡ್ಡಗಟ್ಟಿ ನಮ್ಮ ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News