Saturday, July 27, 2024
Homeಸುದ್ದಿರಾಷ್ಟ್ರೀಯ'ನಾನು ಸತ್ತಿಲ್ಲ.. ಬದುಕಿದ್ದೇನೆ'..: ಬಾಲಿವುಡ್ ನಟಿ ಪೂನಂ ಪಾಂಡೆ ದಿಢೀರ್ ಪ್ರತ್ಯಕ್ಷ..!

‘ನಾನು ಸತ್ತಿಲ್ಲ.. ಬದುಕಿದ್ದೇನೆ’..: ಬಾಲಿವುಡ್ ನಟಿ ಪೂನಂ ಪಾಂಡೆ ದಿಢೀರ್ ಪ್ರತ್ಯಕ್ಷ..!

ಬಾಲಿವುಡ್ ನಟಿ, ಮಾಡೆಲ್‌ ಪೂನಂ ಪಾಂಡೆ ಸಾವಿನ ಸುದ್ದಿ ಸುಳ್ಳಾಗಿದೆ. ತಾನು ಸತ್ತಿಲ್ಲ, ಬದುಕಿದ್ದೇನೆ ಎಂದು ಪೂನಂ ಪಾಂಡೆ ಅವರೇ ಖುದ್ದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮಾಡೆಲ್ ಪೂನಂ ಪಾಂಡೆ (ಗರ್ಭಕಂಠ ಕ್ಯಾನ್ಸರ್) Cervical Cancerಗೆ ತುತ್ತಾಗಿದ್ದು ಸಾವನ್ನಪ್ಪಿದ್ದಾರೆ ಎಂದು ಅವರ ಮ್ಯಾನೇಜರ್ ಮಾಹಿತಿ ನೀಡಿದ್ದರು. ಜನವರಿ 2ರಂದು ಪೂನಂ ಪಾಂಡೆ ಅವರ ಸಾವಿನ ಸುದ್ದಿ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದೀಗ ಪೂನಂ ಪಾಂಡೆ ಅವರೇ ಸ್ಪಷ್ಟನೆ ನೀಡಿದ್ದಾರೆ.

ನಾನು ಸತ್ತಿಲ್ಲ.. ಜೀವಂತವಾಗಿದ್ದೇನೆ. ಗರ್ಭಕಂಠ ಕ್ಯಾನ್ಸರ್‌ನ ಜಾಗೃತಿಗಾಗಿ ಈ ರೀತಿಯ ಸುಳ್ಳು ಹೇಳಿದ್ದೇನೆ. ದಯಮಾಡಿ ಕ್ಷಮಿಸಿ. ಆದರೆ ನನ್ನ ಸಾವಿನ ಸುಳ್ಳು ಸುದ್ದಿಯಿಂದಾಗಿ ಗರ್ಭಕಂಠದ ಕ್ಯಾನ್ಸರ್‌ ಬಗ್ಗೆ ಪ್ರತಿಯೊಬ್ಬರು ಮಾತನಾಡಿದ್ದಾರೆ. ನಾನು ನನ್ನ ಸಾವಿನ ಬಗ್ಗೆ ಸುಳ್ಳು ಹೇಳಿದ್ದು ತಪ್ಪು. ಅದಕ್ಕಾಗಿ ಕ್ಷಮೆ ಕೋರುತ್ತೇನೆ ಎಂದು ಪೂನಂ ಪಾಂಡೆ ಮನವಿ ಮಾಡಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News