Sunday, September 8, 2024
Homeಸುದ್ದಿಕರಾವಳಿಉಡುಪಿ : ಹೊಸ ವರ್ಷಾಚರಣೆಗೆ ನಿಯಮ ಜಾರಿಗೊಳಿಸಿದ ಜಿಲ್ಲಾ ಪೊಲೀಸ್ ಇಲಾಖೆ

ಉಡುಪಿ : ಹೊಸ ವರ್ಷಾಚರಣೆಗೆ ನಿಯಮ ಜಾರಿಗೊಳಿಸಿದ ಜಿಲ್ಲಾ ಪೊಲೀಸ್ ಇಲಾಖೆ

ಉಡುಪಿ : ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಸಿದ್ದತೆಗಳು ಬಲು ಜೋರಾಗಿ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ, ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಕೆಲವು ನಿಯಮಗಳನ್ನು ಜಾರಿಗೊಳಿಸಿದೆ.


ಡಿ. 31 ರ ಮಧ್ಯರಾತ್ರಿ 12. 30 ರ ಒಳಗಾಗಿ ಎಲ್ಲಾ ರೀತಿಯ ಹೊಸ ವರ್ಷಾಚರಣೆಯ ಕಾರ್ಯಕ್ರಮ ಮುಕ್ತಾಯವಾಗಬೇಕು. ಪಬ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮುಂತಾದ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರದಂತೆ ನೋಡಿಕೊಳ್ಳಬೇಕು.

ಇದರೊಂದಿಗೆ ಹೋಟೆಲ್, ಪಬ್, ರೆಸ್ಟೋರೆಂಟ್, ಹೋಮ್ ಸ್ಟೇ, ಪಿಜಿಗಳಲ್ಲಿ ಸಾರ್ವಜನಿಕರಿಗೆ ಈವೆಂಟ್‌ಗಳನ್ನು ಆಯೋಜಿಸುವಾಗ ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡತಕ್ಕದ್ದು, ಕಾರ್ಯಕ್ರಮಗಳ ಆಯೋಜಕರು, ಭದ್ರತಾ ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಸ್ವಯಂಸೇವಕರು, ಪುರುಷ ಮತ್ತು ಮಹಿಳಾ ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.

ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಅಮಲು ಅಥಾವ ಮದ್ಯದ ನಶೆಯಲ್ಲಿ ಆಚರಣೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಬಸ್ ಸ್ಟಾಂಡ್, ಸಮುದ್ರ ತೀರ, ರಸ್ತೆ ಫುಟ್ ಪಾತ್, ಗಾರ್ಡನ್ ಮತ್ತು ಇತರೇ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಯ ಯಾವುದೇ ಕಾರ್ಯಕ್ರಮಗಳನ್ನು ನಡೆಸಬಾರದು ಎಂದು ಉಡುಪಿ ಜಿಲ್ಲಾ ಎಸ್ ಪಿ ಡಾಕ್ಟರ್ ಅರುಣ್ ಮಾಹಿತಿ ಹೊರಡಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News