Sunday, September 8, 2024
Homeಸುದ್ದಿರಾಷ್ಟ್ರೀಯಎಸ್‌ಯುವಿ ರೂಫ್ ನಲ್ಲಿ ಮಕ್ಕಳನ್ನು ಮಲಗಿಸಿ ಕಾರು ಚಾಲನೆ : ಪ್ರಕರಣ ದಾಖಲು

ಎಸ್‌ಯುವಿ ರೂಫ್ ನಲ್ಲಿ ಮಕ್ಕಳನ್ನು ಮಲಗಿಸಿ ಕಾರು ಚಾಲನೆ : ಪ್ರಕರಣ ದಾಖಲು

ಗೋವಾ : ಎಸ್‌ಯುವಿ ಕಾರಿನ ರೂಫ್ ಟಾಪ್ ನಲ್ಲಿ ಇಬ್ಬರು ಪುಟಾಣಿ ಮಕ್ಕಳನ್ನು ಮಲಗಿಸಿ ಕಾರು ಚಲಾಯಿಸಿದ ದೃಶ್ಯ ವೈರಲ್ ಆಗಿದ್ದು, ಚಾಲಕನ ವಿರುದ್ದ ಗೋವಾದಲ್ಲಿ ಪ್ರಕರಣ ದಾಖಲಾಗಿದೆ.

ಈ ದೃಶ್ಯವನ್ನು ನೋಡಿ ಆತಂಕಗೊಂಡ ಸ್ಥಳೀಯರೊಬ್ಬರು ಈ ದೃಶ್ಯವನ್ನು ಚಿತ್ರೀಕರಿಸಿದ್ದು, ಕಾರು ತಡೆದು ಮಕ್ಕಳು ಮೇಲೆ ಮಲಗಿದ್ದಾರೆ ಏನಿದು ಎಂದು ಚಾಲಕರನ್ನು ಪ್ರಶ್ನೆ ಮಾಡಿದ್ದಾರೆ ಅದಕ್ಕೆ ಚಾಲಕ ಹಾರಿಕೆ ಉತ್ತರ ನೀಡಿದ್ದಾರೆ.

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಳಕೆದಾರರು ಆಕ್ರೋಶ ಹೊರಹಾಕಿದ್ದಾರೆ. ಗೋವಾದ ಜನಪ್ರಿಯ ಪ್ರವಾಸಿ ತಾಣವಾದ ಪರ್ರಾ ಕೋಕೋನಟ್ ಟ್ರೀ ರಸ್ತೆಯಲ್ಲಿ ಕಪ್ಪು ಮಹೀಂದ್ರಾ ಎಸ್ಯುವಿ ಚಲಿಸುತ್ತಿರುವುದನ್ನು ಕಾಣಬಹುದು, ಈ ಕಾರಿನ ಮೇಲೆ ಮಕ್ಕಳು ಮಲಗಿಕೊಂಡಿದ್ದಾರೆ .ಒಂದೊಮ್ಮೆ ಕಾರನ್ನು ಟರ್ನ್ ಮಾಡುವಾಗ ಅಥವಾ ಬ್ರೇಕ್ ಹಾಕುವಾಗ ಎನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಮಕ್ಕಳ ಸುರಕ್ಷತೆಯನ್ನು ಕಾಪಾಡುವ ಪೋಷಕರೇ ಈ ರೀತಿ ನಡೆದುಕೊಂಡಿರುವುದಕ್ಕೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ವೈರಲ್ ಆದ ವೀಡಿಯೋವನ್ನು ಗಮನಿಸಿದ ಗೋವಾ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. ಮಾಪುಸಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ವೀಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ. ಮಾಪುಸಾ ಸಮೀಪದ ಪರ್ರಾ ಗ್ರಾಮದ ಮದನಿಯಲ್ಲಿ ಡಿ.27 ರಂದು ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News