Sunday, September 8, 2024
Homeಸುದ್ದಿಕರಾವಳಿಮಂಗಳೂರಿನ ಪ್ರಸಿದ್ಧ ಈ ಬೀಚ್‍ನಲ್ಲಿ 3ನೇ ‘ತೇಲುವ ಸೇತುವೆ’ ಉದ್ಘಾಟನೆ.. ಪ್ರವಾಸಿಗರು ಫುಲ್ ಖುಷ್..!

ಮಂಗಳೂರಿನ ಪ್ರಸಿದ್ಧ ಈ ಬೀಚ್‍ನಲ್ಲಿ 3ನೇ ‘ತೇಲುವ ಸೇತುವೆ’ ಉದ್ಘಾಟನೆ.. ಪ್ರವಾಸಿಗರು ಫುಲ್ ಖುಷ್..!

ಮಂಗಳೂರು : ಪಣಂಬೂರು ಬೀಚ್ ಪ್ರವಾಸಿಗರ ಹಾರ್ಟ್ ಫೇವ್ ರೇಟ್. ಇದೀಗ ಕಡಲ ತಡಿ ಮಂಗಳೂರಿನ ಪ್ರಸಿದ್ಧ ಬೀಚ್‍ನಲ್ಲಿ ತೇಲುವ ಸೇತುವೆ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಆಳೆತ್ತರದ ಅಲೆಗಳ ಮೇಲೆ ತೇಲುವ ಸೇತುವೆ ಈಗ ಪ್ರವಾಸಿಗರ ಹೊಸ ಆಕರ್ಷಣೆಯ ಕೇಂದ್ರವಾಗಿದೆ. ರಾಜ್ಯದ 3ನೇ ತೇಲುವೆ ಸೇತುವೆ ಉದ್ಘಾಟನೆಗೊಂಡಿದೆ.

ಪ್ರಸಿದ್ಧ ಪ್ರವಾಸಿ ತಾಣ ಪಣಂಬೂರು ಬೀಚ್ನಲ್ಲಿ ಇನ್ನು ತೇಲುವ ಸೇತುವೆ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿಲಿದೆ. ರಾಜ್ಯದ 3ನೇ ತೇಲುವ ಸೇತುವೆ ಮಂಗಳೂರಿನಲ್ಲಿ ಲೋಕಾರ್ಪಣೆ ಗೊಂಡಿದೆ. ಜಾಕೆಟ್ ಹಾಕ್ಕೊಂಡು ಮೇಲೆ ಕೆಳಗೆ ಚಲಿಸುವ ಸೇತುವೆಯಲ್ಲಿ ನಡೆದಾಡುವುದೇ ಒಂದು ಸಾಹಸ. ಹೊಸ ವರ್ಷಾಚರಣೆಯ ದೊಡ್ಡ ಆಕರ್ಷಣೆಗೆ ಈ ತೇಲುವೆ ಸೇತುವೆ ಕಾರಣವಾಗಲಿದೆ. ಇನ್ನೂ ಈ ತೇಲುವ ಸೇತುವೆಯನ್ನ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ನಿನ್ನೆ ಸಂಜೆ ಲೋಕಾರ್ಪಣೆ ಮಾಡಿದ್ರು. ಅವರೂ ಕೂಡಾ ಜಾಕೆಟ್ ತೊಟ್ಟು ತೇಲುವ ಸೇತುವೆ ಮೇಲೆ ಹೆಜ್ಜೆ ಹಾಕಿದ್ರು. ಬಳಿಕ ಮಾತನಾಡಿದ ವಿಧಾನಸಭಾ ಸ್ಪೀಕರ್ ಖಾದರ್‌, ಪ್ರವಾಸೋಧ್ಯಮಕ್ಕೆ ಈ ತೇಲುವ ಸೇತುವೆ ಹೊಸ ಆಕರ್ಷಣೆ ಆಗಲಿದೆ ಅಂತ ಅಭಿಪ್ರಾಯಪಟ್ಟರು.

ಕರಾವಳಿ ಪ್ರದೇಶದಲ್ಲಿ ಹೆಸರುವಾಸಿಯಾದ ಪಣಂಬೂರು ಬೀಚ್ನಲ್ಲಿ ಫ್ಲೋಟ್ ವಾಕಿಂಗ್ ಮತ್ತು ಪ್ಯಾರಸೈಲಿಂಗ್ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯಲು ಸಹಕಾರಿಯಾಗಿವೆ. ತೇಲುವ ಬ್ರಿಡ್ಜ್ನಲ್ಲಿ ಹೋಗುವಾಗ ಸಂತೋಷ ಆಗುತ್ತದೆ.

ಯು.ಟಿ. ಖಾದರ್, ವಿಧಾನಸಭಾ ಸ್ಪೀಕರ್

ಮಲ್ಪೆ ಬೀಚ್ ಬಳಿಕ ಇದೀಗ ದಕ್ಷಿಣಕನ್ನಡದ ಬೀಚ್‍ನಲ್ಲಿ ಮೊದಲ ತೇಲುವ ಸೇತುವೆ ಇದಾಗಿದ್ದು, ಈಗ ಪಣಂಬೂರು ಬೀಚ್ ಪಿಪಿಪಿ ಮಾದರಿಯಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದೆ. ಪ್ರತೀ ವ್ಯಕ್ತಿಗೆ 150 ರೂಪಾಯಿ ದರ ವಿಧಿಸಲಾಗುತ್ತಿದ್ದು, ಶಾಲಾ ಮಕ್ಕಳಿಗೆ ರಿಯಾಯಿತಿ ನೀಡಲಾಗುತ್ತಿದೆ. ಸುಮಾರು 150 ಮೀಟರ್ ಉದ್ದವಿರುವ ಈ ತೇಲುವ ಸೇತುವೆ ಮೇಲೆ 50 ಮಂದಿ ಏಕಕಾಲಕ್ಕೆ ಸೇತುವೆಯ ತುದಿಯಲ್ಲಿ ನಿಂತು ಸೂರ್ಯಾಸ್ತಮಾನ ನೋಡಬಹುದು. ಇನ್ನು ಒಂದು ವರ್ಷದಲ್ಲಿ ಈ ಬೀಚ್‌ನ ಚಿತ್ರಣವೇ ಬದಲಾಗುತ್ತಿದ್ದು, ಬೀಚ್ ರೆಸಾರ್ಟ್, ಅಂತರಾಷ್ಟ್ರೀಯ ಮಟ್ಟದ ಫುಡ್ ಕೋರ್ಟ್, ಸ್ಕೂಬಾ ಡೈವಿಂಗ್ , ಪ್ಯಾರಾಸೈಲಿಂಗ್ ಪ್ರವಾಸಿಗರನ್ನು ಆಕರ್ಷಿಸಲಿದೆ.

ವರ್ಲ್ಡ್ಕ್ಲಾಸ್ ಬೀಚ್ ಮಾಡಲು ಎಲ್ಲ ಕಾರ್ಯಗಳ ಸಿದ್ಧತೆ

ಪ್ಯಾರಸೈಲಿಂಗ್ ಈಗಾಗಲೇ ಓಪನ್ ಆಗಿದೆ. ಸ್ಕೂಬಾ ಡೈವಿಂಗ್ ಒಂದು ವಾರದಲ್ಲಿ ಪ್ರಾರಂಭ ಆಗುತ್ತದೆ. ವಲ್ಡ್ಕ್ಲಾಸ್ ಫುಡ್ ಕೋರ್ಟ್ ಅನ್ನು ಓಪನ್ ಮಾಡಲು ಪ್ಲಾನ್ ಮಾಡಲಾಗುತ್ತಿದೆ. ರೆಸ್ಟೋರೆಂಟ್, ಕಾರ್ಟೆಜ್ ಅನ್ನು ಕೂಡ ಮಾಡಲಿದ್ದೇವೆ. ಒಂದು ವರ್ಷದಲ್ಲಿ ಎಲ್ಲವನ್ನು ಅಭಿವೃದ್ಧಿ ಮಾಡಿ ವರ್ಲ್ಡ್ಕ್ಲಾಸ್ ಬೀಚ್ ಮಾಡಲು ಎಲ್ಲ ಕಾರ್ಯಗಳು ನಡೆಯುತ್ತಿವೆ.

ಲಕ್ಷ್ಮೀಶ್ ಭಂಡಾರಿ, ಬೀಚ್ ನಿರ್ವಹಣಾ ಸಂಸ್ಥೆ ಪಾಲುದಾರ

ಇನ್ನೂ ಬೃಹತ್ ಅಲೆಯ ನಡುವೆ ತೇಲುವ ಸೇತುವೆಯಲ್ಲಿ ಪ್ರವಾಸಿಗರು ನಡೆದಾಡಿ ಸಂಭ್ರಮಿಸಿದ್ರು. ಪೆಣಂಬೂರು ಬೀಚ್‌ನ ಸೌಂದರ್ಯವನ್ನ ಸವಿದು ಸಂತೋಷಪಟ್ರು.

ತೇಲುವ ಸೇತುವೆಯಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಒಟ್ಟು 12 ಮಂದಿ ಲೈಫ್ ಗಾರ್ಡ್ಸ್‌ನ ನೇಮಿಸಲಾಗಿದೆ. ಜೊತೆಗೆ ಲೈಫ್ ಜಾಕೆಟ್‌ನ ಕಡ್ಡಾಯ ಮಾಡಲಾಗಿದೆ. ಒಟ್ಟಾರೆ, ಪೆಣಂಬೂರು ಬೀಚ್‌ನ ಸರ್ಕಾರ ಮತ್ತು ಖಾಸಗೀ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಇದೀಗ ಪ್ಲೋಟಿಂಗ್‌ ಬ್ರಿಡ್ಜ್‌ನಿಂದ ಈ ಕಡಲಕಿನಾರೆ ಮತ್ತಷ್ಟು ಪ್ರವಾಸಿಗರನ್ನ ಕೈ ಬೀಸಿ ಕರೆಯೋದಂತೂ ಪಕ್ಕಾ

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News