Sunday, September 8, 2024
Homeಸುದ್ದಿರಾಷ್ಟ್ರೀಯಶಬರಿಮಲೆಯ ಅಯ್ಯಪ್ಪ ಭಕ್ತರಿಗೆ ನೀರು,ಆಹಾರ ಸೌಲಭ್ಯ ಒದಗಿಸುವಂತೆ ಹೈಕೋರ್ಟ್‌ ನಿರ್ದೇಶನ

ಶಬರಿಮಲೆಯ ಅಯ್ಯಪ್ಪ ಭಕ್ತರಿಗೆ ನೀರು,ಆಹಾರ ಸೌಲಭ್ಯ ಒದಗಿಸುವಂತೆ ಹೈಕೋರ್ಟ್‌ ನಿರ್ದೇಶನ

ಕೊಚ್ಚಿ : ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ತೆರಳುವ ಭಕ್ತರಿಗೆ ನೀರು,ಆಹಾರ ಮತ್ತು ಇತರ ಸೌಲಭ್ಯಗಳನ್ನುಸೂಕ್ತ ರೀತಿಯಲ್ಲಿ ಒದಗಿಸುವಂತೆ ಕೇರಳ ಹೈಕೋರ್ಟ್ ಸೋಮವಾರ ವಿಶೇಷ ಸಭೆ ನಡೆಸಿ ತಿರುವಾಂಕೂರು ದೇವಸ್ವಂ ಮಂಡಳಿಗೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಜಿ. ಗಿರೀಶ್ ಅವರ ಪೀಠವು ವಿಶೇಷ ಅಧಿವೇಶನ ನಡೆಸಿ, ಮಕ್ಕಳು ಸೇರಿದಂತೆ ಭಕ್ತರು ಶಬರಿಮಲೆಗೆ ಹೋಗುವ ರಸ್ತೆಗಳಲ್ಲಿ ಸುಮಾರು 12 ಗಂಟೆಗಳ ಕಾಲ ಆಹಾರ ಮತ್ತು ನೀರಿಲ್ಲದೆ ಸಿಲುಕಿಕೊಂಡುಪರದಾಡಿದ್ದಾರೆ ಗಮನಕ್ಕೆ ತಂದರು.

ಯಾತ್ರಾರ್ಥಿಗಳಿಗೆ ಅಲ್ಪಾವಧಿಯ ತಂಗುದಾಣವಾಗಿರುವ ಎಡತಾವಲಮ್ಗಳಲ್ಲಿ ನೀರು, ತಿಂಡಿ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಪೀಠವು ತಿರುವಾಂಕೂರು ದೇವಸ್ವಂ ಮಂಡಳಿಗೆ (ಟಿಡಿಬಿ) ನಿರ್ದೇಶನ ನೀಡಿದೆ.

ದೇಗುಲ ಮತ್ತು ಸುತ್ತಮುತ್ತಲಿನ ಜನಸಂದಣಿ ನಿಯಂತ್ರಣ ಕಾರ್ಯಾಚರಣೆಗಳನ್ನು ಸಂಪೂರ್ಣ ಮೇಲ್ವಿಚಾರಣೆ ಮಾಡಲು ಮತ್ತುಅಗತ್ಯವಿದ್ದರೆ ಹೆಚ್ಚುವರಿ ಪೊಲೀಸ್ ಸಿಬಂದಿಗಳನ್ನು ನಿಯೋಜಿಸಲು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ನ್ಯಾಯಾಲಯ ಸೂಚಿಸಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News