Sunday, September 8, 2024
Homeಸುದ್ದಿಕರಾವಳಿಉಡುಪಿ : ಮೆಹೆಂದಿ ಕಾರ್ಯಕ್ರಮದಲ್ಲಿ ಕರ್ಕಶ ಡಿಜೆ : ಪೊಲೀಸರ ದಾಳಿ

ಉಡುಪಿ : ಮೆಹೆಂದಿ ಕಾರ್ಯಕ್ರಮದಲ್ಲಿ ಕರ್ಕಶ ಡಿಜೆ : ಪೊಲೀಸರ ದಾಳಿ

ಉಡುಪಿ : ಪರವಾನಿಗೆ ಇಲ್ಲದೆ ಮೆಹಂದಿ ಕಾರ್ಯಕ್ರಮ ನಡೆಸಿದ ಕರ್ಕಶ ಡಿಜೆ ಬಳಸಿದ ಮನೆಗೆ ಪೊಲೀಸರು ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದಿದ್ದಾರೆ.


ಅಂಬಲಪಾಡಿಯ ಪ್ರಜ್ವಲ್‌ ನಗರದ ರೈಸ್‌ ಮಿಲ್‌ ಪರಿಸರದ ಮನೆಯೊಂದರಲ್ಲಿ ಅತೀ ಕರ್ಕಶವಾದ ಶಬ್ದ ಬಳಸಿ ಕಾರ್ಯಕ್ರಮ ನಡೆಸುತ್ತಿದ್ದುಸ್ಥಳಕ್ಕೆ ಪೊಲೀಸರು ಹೋಗಿ ನೋಡಿದಾಗ ಯಾವುದೇ ಪೂರ್ವಾನುಮತಿ ಪಡೆಯದೇ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಕಂಡು ಬಂತು.

ಧ್ವನಿವರ್ಧಕವನ್ನು ಅತೀ ಕರ್ಕಶವಾಗಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ತಡರಾತ್ರಿಯವರೆಗೂ ಬಳಸಿದ್ದರಿಂದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News