Thursday, April 25, 2024
Homeಸುದ್ದಿಶಿರ್ವ ಶಾರದೋತ್ಸವ: ವೈಭವದ ಶೋಭಾಯಾತ್ರೆ ಸಂಪನ್ನ

ಶಿರ್ವ ಶಾರದೋತ್ಸವ: ವೈಭವದ ಶೋಭಾಯಾತ್ರೆ ಸಂಪನ್ನ

ಶಿರ್ವ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಶಿರ್ವ ಇವರ ವತಿಯಿಂದ ಪ್ರಥಮ ಬಾರಿಗೆ ಶಿರ್ವದಲ್ಲಿ ಶ್ರೀ ಶಾರದ ಮಹೋತ್ಸವ, ಮಹಾ ಅನ್ನಸಂತರ್ಪಣೆ ಹಾಗೂ ವೈಭವದ ಶೋಭಾಯಾತ್ರೆ ಜರುಗಿತು.

ಈ ಬಾರಿಯ ಶಾರದಾ ಮಾತೆಯ ಮೆರವಣಿಗೆಯ ಜೊತೆಗೆ ಸ್ತಬ್ದಚಿತ್ರಗಳು ಸಾಗಿ ಬಂದವು. ಚೆಂಡೆ, ವಾದ್ಯ, ವೈವಿಧ್ಯ ಸ್ತಬ್ಧಚಿತ್ರಗಳು, ಜಾನಪದ ಕಲಾ ತಂಡಗಳು, ನಾಸಿಕ್‌ ಬ್ಯಾಂಡ್‌, ಭಜನೆ ಸೇರಿದಂತೆ ವಿವಿಧ ಕಲಾ ಪ್ರಾಕಾರಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು.

ಸಮಿತಿಯ ಅಧ್ಯಕ್ಷರಾದ ಶ್ರೀ ಹರಿಪ್ರಸಾದ್‌ ಸಾಲ್ಯಾನ್‌ ನೇತೃತ್ವದಲ್ಲಿ ನಡೆದ ಪ್ರಥಮ ವರ್ಷದ ಶಾರದೋತ್ಸವದ ಪೂಜಾ ಸೇವೆಯು ವೇ| ಮೂ| ಕುತ್ಯಾರು ಶ್ರೀ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.

ಲಕ್ಕಿಡಿಪ್‌ ಫಲಿತಾಂಶ

ಸಾರ್ವಜನಿಕ ಶ್ರೀ ಶಾರದೋತ್ಸವ ಸೇವಾ ಸಮಿತಿ ಶಿರ್ವ, ಇವರ ವತಿಯಿಂದ ನಡೆದ ಲಕ್ಕಿ ಡೀಪ್ ಡ್ರಾದ ಪಲಿತಾಂಶ
1) ಪ್ರಥಮ ಬಹುಮಾನ- ನಂ.36
2) ಏರಡನೇ ಬಹುಮನ .. ನಂ.308
3 )ಮೂರನೇ ಬಹುಮಾನ-ನಂ.760
ಮೂರು ಸಮಾದಾನಕರ ಬಹುಮಾನಗಳು
1) ನಂ.862
2) ನಂ.427
3) ನಂ.339

ಶಾರದ ಮಾತೆಯ ಜಲಸ್ಥಂಭ ನವು ಕೋಡು ಬ್ರಹ್ಮ ಸ್ಥಾನದ ಬ್ರಹ್ಮರ ಕೆರೆಯಲ್ಲಿ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ನಡೆಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News