ಅಬ್ಬಾ! 108 ಅಡಿ ಉದ್ದದ ಅಗರಬತ್ತಿ.. ರಾಮಮಂದಿರಕ್ಕೆ ರಾಮಭಕ್ತ ವಿಶೇಷ ಉಡುಗೊರೆ

ಗುಜರಾತ್ : ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ರಾಮಮಂದಿರ ಉದ್ಘಾಟನೆಗಾಗಿ ಸಕಲ ಸಿದ್ಧತೆಗಳು ನಡೀತಿದೆ. ಇನ್ನು ಭಕ್ತರು ತಮ್ಮ ಕಡೆಯಿಂದ ರಾಮಮಂದಿರಕ್ಕೆ ವಿಶೇಷ ಉಡುಗೊರೆಗಳನ್ನ ಕೊಡೋದಕ್ಕೆ ರೆಡಿ ಮಾಡಿಕೊಂಡಿದ್ದಾರೆ.

ಇದೀಗ ಗುಜರಾತ್‌ನ ವಡೋದರದಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕಾಗಿ ವಿಶೇಷವಾದ ಬೃಹದಾಕಾರದ ಅಗರಬತ್ತಿ ತಯಾರಿಸಲಾಗುತ್ತಿದೆ. ಈ ಅಗರಬತ್ತಿಯನ್ನ ರಾಮಮಂದಿರದ ಪ್ರತಿಷ್ಠಾಪನೆಗೂ ಮೊದಲೇ ಅಯೋಧ್ಯೆಗೆ ಕಳುಹಿಸಲಾಗುತ್ತದೆ.

ಈ ಅಗರಬತ್ತಿ 108 ಅಡಿ ಉದ್ದವಿದೆ. ಅಲ್ಲದೇ ಇದು 3 ಸಾವಿರದ ನಾನೂರ 28 ಕಿಲೋ ತೂಕವಿದೆ. ಇದನ್ನ 10ಕ್ಕೂ ಹೆಚ್ಚು ಕಬ್ಬಿಣದ ಟ್ರೈಪಾಡ್ ಸ್ಟ್ಯಾಂಡ್ ಅಳವಡಿಸಿ ಅವುಗಳ ಮೇಲೆ ಅಗರಬತ್ತಿ ತಯಾರಿಸಲಾಗುತ್ತಿದೆ.

You cannot copy content from Baravanige News

Scroll to Top