ಕೇರಳದಲ್ಲಿ ಕೊರೊನಾ ಭೀತಿ ; ಕರ್ನಾಟಕದಲ್ಲೂ ಹೈ ಅಲರ್ಟ್; ನ್ಯೂಇಯರ್ ಗೆ ಸ್ಟ್ರಿಕ್ಟ್ ರೂಲ್ಸ್!

ಬೆಂಗಳೂರು : ಹೊಸ ವರ್ಷವನ್ನ ಹೊಸ ಹರ್ಷದಿಂದ ಆಚರಿಸಲು ಕರುನಾಡ ಸಜ್ಜಾಗುತ್ತಿದೆ. ಈ ಹೊತ್ತಲ್ಲೇ ಜನರ ಕಲರ್‌ಪುಲ್ ಲೈಫ್‌ಗೆ ಕೊರೊನಾ ಹೊಸ ವೈರಸ್‌ ಕಂಟಕವಾಗಲು ಸಜ್ಜಾಗಿದೆ. ಕೇರಳದಲ್ಲಿ ಕಾಣಿಸಿಕೊಂಡಿರೋ ಹೆಮ್ಮಾರಿ ಭೀತಿ ರಾಜ್ಯಕ್ಕೂ ತಟ್ಟಿದ್ದು, ಆರೋಗ್ಯ ಇಲಾಖೆ ಅಲರ್ಟ್‌ ಆಗಿದೆ. ಜೊತೆಗೆ ನ್ಯೂ ಇಯರ್ ಸೆಲೆಬ್ರೇಷನ್ ಮೇಲೆ ಕೊರೊನಾ ಕರಿಛಾಯೆ ಆವರಿಸಿದೆ.

2020ರಲ್ಲಿ ದೇಶಕ್ಕೆ ಎಂಟ್ರಿ ಕೊಟ್ಟಿದ್ದ ಕೊರೊನಾ ಎಂಬ ಕ್ರಿಮಿ ಜನರ ರಕ್ತ ಹೀರಿತ್ತು. ಸಾವಿರಾರು ಜನರ ಪ್ರಾಣವನ್ನ ಕಸಿದಿತ್ತು. ಇದೀಗ ಮತ್ತೆ ಕೇರಳದ ಮೂಲಕ ಕೊರೊನಾ ರೂಪಾಂತರಿ ದಾಂಗುಡಿ ಇಟ್ಟಿದೆ. ಇಷ್ಟು ದಿನ ಅವಿತು ಕೂತಿದ್ದ ಕಾಣದ ಕ್ರಿಮಿ ಮತ್ತೆ ಬಾಲ ಬಿಚ್ಚಿದೆ.

ಡಿ.19ಕ್ಕೆ ಕೋವಿಡ್‌ ‘ತಾಂತ್ರಿಕ ಸಲಹಾ ಸಮಿತಿ’ಯ ಸಭೆ

ದೇವರ ನಾಡಿನಲ್ಲಿ ಕಾಣಿಸಿಕೊಂಡಿರೋ ಕೋವಿಡ್ ಕ್ರಿಮಿ ಕರ್ನಾಟಕದಲ್ಲೂ ಆತಂಕ ಹುಟ್ಟಿಸಿದೆ. ಹೀಗಾಗಿ ಕೊರೊನಾ ವೈರಸ್‌ನ ಕಟ್ಟಿ ಹಾಕಲು ರಾಜ್ಯ ಆರೋಗ್ಯ ಇಲಾಖೆ ಶಸ್ತ್ರಾಭ್ಯಾಸಕ್ಕೆ ಮುಂದಾಗಿದೆ. ಡಿಸೆಂಬರ್ 19ಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಕೋವಿಡ್ ತಾಂತ್ರಿಕಾ ಸಲಹಾ ಸಮಿತಿ ಸಭೆಯನ್ನ ಕರೆದಿದ್ದಾರೆ.

ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ರವಿ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕೊರೊನಾ ಸೋಂಕಿನ ಬಗ್ಗೆ ಚರ್ಚೆ ನಡೆಯಲಿದ್ದು, ಹೊಸ ರೂಲ್ಸ್ ಜಾರಿಯ ಬಗ್ಗೆ ಸರ್ಕಾರ ಚಿಂತನೆ ನಡೆಸುವ ಸಾಧ್ಯತೆ ಇದೆ. ಕೊರೊನಾ ಕ್ರಿಮಿ ಎಂಬ ಸವಾಲನ್ನ ಮೆಟ್ಟಿ ನಿಲ್ಲೋಕೆ ನಾವು ಸಿದ್ಧ ಅಂತ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಜೊತೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯೋನ್ಮುಖರಾಗಿದ್ದಾರೆ.

ನ್ಯೂ ಇಯರ್ ಸೆಲೆಬ್ರೆಷನ್‌ಗೆ ಜಾರಿಯಾಗುತ್ತಾ ಮಾರ್ಗಸೂಚಿ.!?

2023 ಕಳೆದು 2024ಕ್ಕೆ ಕಾಲಿಡಲು ರಾಜ್ಯದ ಜನತೆ ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿ ಮಂದಿ ಹೊಸ ವರ್ಷವನ್ನು ಅದ್ಧೂರಿಯಾಗಿ ಸೆಲೆಬ್ರೇಟ್‌ ಮಾಡಲು ಕಾತರರಾಗಿದ್ದಾರೆ. ಆದ್ರೆ, ಕೊರೊನಾ ಕ್ರಿಮಿ ಈ ಸಂತೋಷಕ್ಕೆ ಬ್ರೇಕ್ ಹಾಕುವ ಭೀತಿ ಹುಟ್ಟಿದೆ. ಪ್ರಿಕಾಷನ್ ಈಸ್ ಬೆಟರ್ ದೆನ್ ಕ್ಯೂರ್ ಎಂಬ ಮಾತಿದೆ. ಅದರಂತೆ ಕೋವಿಡ್ ಸೋಂಕು ದೇಹವನ್ನ ಹೊಕ್ಕುವ ಮುನ್ನವೇ ಎಲ್ಲರು ಮುನ್ನೆಚ್ಚರಿಕೆ ವಹಿಸಿದ್ರೆ ಒಳಿತು.

You cannot copy content from Baravanige News

Scroll to Top