ಶಬರಿಮಲೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿ-ಕೇರಳ ಸಿಎಂಗೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಮನವಿ

ಹೈದರಾಬಾದ್, ಡಿ.16: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಇತ್ತೀಚೆಗೆ ನೂಕುನುಗ್ಗಲು ನಡೆದಿತ್ತು. ಮಾತ್ರವಲ್ಲ ಇಲ್ಲಿರುವ ವ್ಯವಸ್ಥೆಗಳು ಸರಿಯಾಗಿಲ್ಲ ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಈ ಬಗ್ಗೆ ಕೇರಳ ಸರಕಾರ ಗಮನ ಹರಿಸಿ ಸಮಸ್ಯೆ ಪರಿಹಾರ ಮಾಡಬೇಕು ಜೊತೆಗೆ ಇದರ ಸಂಪೂರ್ಣ ಅಧಿಕಾರವನ್ನು ಕೇರಳ ಸರಕಾರದ ಕೈಯಿಂದ ಕೇಂದ್ರ ಸರಕಾರ ತೆಗೆದುಕೊಳ್ಳಬೇಕು ಅನ್ನುವ ಒತ್ತಾಯ ಭಕ್ತ ವರ್ಗದಿಂದ ಕೇಳಿ ಬಂದಿತ್ತು.

ಇವೆಲ್ಲದರ ನಡುವೆ ಕೇರಳ ಸಿಎಂ ಪಿಣರಾಯಿ ವಿಜಯನ್ ಗೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರು ಪತ್ರವೊಂದು ಬರೆದಿದ್ದಾರೆ.ಇದರಲ್ಲಿ ಅವರು ನವೆಂಬರ್ ನಿಂದ ಜನವರಿಯವರೆಗೆ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ.

ವಿವಿಧ ರಾಜ್ಯಗಳಿಂದ ಅಯ್ಯಪ್ಪ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ.ಆದರೆ ಯಾತ್ರಾರ್ಥಿಗಳು ಅಲ್ಲಿಗೆ ಹೋಗುವಾಗ ಸಮಸ್ಯೆ ಎದುರಿಸಬೇಕಾಗುತ್ತದೆ.ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವುದರಿಂದ ಸೂಕ್ತ ಮೂಲಸೌಕರ್ಯ ಒದಗಿಸಬೇಕು.

ವಿವಿಧ ಸುದ್ದಿಗಳ ಪ್ರಕಾರ,ಅಯ್ಯಪ್ಪ ಭಕ್ತರ ಶಬರಿಮಲೆ ದರ್ಶನಕ್ಕೆ ತೊಂದರೆಯಾಗುತ್ತಿದೆ ಮತ್ತು ಸನ್ನಿಧಾನಕ್ಕೆ ಹೋಗಲು ಭಕ್ತರು ಬಹಳ ಸಮಯ ಕಾಯಬೇಕಾಗಿದೆ ಎಂದು ತಿಳಿಯುತ್ತಿದೆ.

ಸಮಸ್ಯೆಯನ್ನು ತಡೆಯಲು ದೇಗುಲದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಬೇಕು.ಇದರಿಂದ ಭಕ್ತರು ಹೆಚ್ಚು ಸಮಯ ಕಾಯುವುದನ್ನು ತಪ್ಪಿಸಬಹುದು.
ಇದಲ್ಲದೆ ಭಕ್ತರಿಗೆ ಆಹಾರ, ನೀರು, ಶುದ್ಧ ನೈರ್ಮಲ್ಯ ಪರಿಸರ ವ್ಯವಸ್ಥೆ, ವೈದ್ಯಕೀಯ ನೆರವು ಸಿಗುವಂತೆ ವ್ಯವಸ್ಥೆ ಮಾಡಿ.

ಅಯ್ಯಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಸುರಕ್ಷಿತ ಮಾರ್ಗಗಳನ್ನು ನಿರ್ಮಿಸಿ ಭಕ್ತರು ಸುರಕ್ಷಿತವಾಗಿ ತೆರಳುವಂತೆ ಮಾಡಬೇಕು ಎಂದು ಕೇಂದ್ರ ಸಚಿವ ಸಚಿವ ಕಿಶನ್ ರೆಡ್ಡಿ ಮನವಿ ಮಾಡಿದ್ದಾರೆ.

You cannot copy content from Baravanige News

Scroll to Top