ಸಂಸತ್ ಭವನದ ಭದ್ರತಾ ವೈಫಲ್ಯ: ಮಾಸ್ಟರ್ ಮೈಂಡ್ ಲಲಿತ್ ಝಾ ಬಂಧನ

ನವದೆಹಲಿ, ಡಿ 15: ಸಂಸತ್ ಭವನದ ಭದ್ರತಾ ಲೋಪ ಪ್ರಕರಣದ ಮಾಸ್ಟರ್ ಮೈಂಡ್ ಹಾಗೂ ಐದರನೇ ಆರೋಪಿಯದ ಲಲಿತ್ ಝಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ದೆಹಲಿ ಪೊಲೀಸರು ಇತನನ್ನು ಬಂಧಿಸಿದ್ದಾರೆ.

ಈಗಾಗಲೇ ಭದ್ರತಾ ವ್ಯವಸ್ಥೆ ಭೇದಿಸಿ, ಲೋಕಸಭೆ ಹಾಗೂ ಸಂಸತ್ ಭವನದ ಹೊರಗಡೆ ಸ್ಮೋಕ್ ಕ್ಯಾನ್‌ ಎಸೆದಿರುವ ನಾಲ್ಕು ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ನಡೆಸಿದ ಕಾರಣ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿಯೂ ಪ್ರಕರಣ ದಾಖಲಿಸಿದೆ.

ಈ ಮಧ್ಯೆ, ದಾಳಿ ಪ್ರಕರಣದ ಪ್ರಮುಖ ರೂವಾರಿ ಎನ್ನಲಾಗಿರುವ, ಕೋಲ್ಕತ್ತ ಮೂಲದ ಶಿಕ್ಷಕ ಲಲಿತ್‌ ಝಾ ಎನ್ನುವವರು ಪೊಲೀಸರ ಬಲೆಗೆ ಬಿದಿದ್ದು, ಲಲಿತ್‌ ವಿರುದ್ಧ ಮೊಕದ್ದಮೆಯನ್ನು ದಾಖಲಿಸಿದ ಪೊಲೀಸರು ಬಳಿಕ ಈತನನ್ನು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ಘಟಕದ ವಶಕ್ಕೆ ಒಪ್ಪಿಸಿದ್ದಾರೆ.

ಇನ್ನು ಈತನ ತನಿಖೆಯ ಸಂದರ್ಭದಲ್ಲಿ ಇನ್ನೂ ಇಬ್ಬರ ಹೆಸರು ಪ್ರಸ್ತಾಪ ಆಗಿದೆ, ಎಲ್ಲವನ್ನೂ ವ್ಯವಸ್ಥಿತವಾಗಿ ಯೋಜಿಸಿ ಕೃತ್ಯ ಎಸಗಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಆರೋಪಿಗಳು ಸಂಸತ್ತಿಗೆ ಬರುವುದಕ್ಕೂ ಮೊದಲು ಗುರುಗ್ರಾಮದಲ್ಲಿ ವಿಶಾಲ್ ಶರ್ಮ ಅಲಿಯಾಸ್ ವಿಕ್ಕಿ ಎನ್ನುವವರ ನಿವಾಸದಲ್ಲಿದ್ದರು ಎನ್ನಲಾಗಿದೆ.

You cannot copy content from Baravanige News

Scroll to Top