ಗ್ರಾಹಕರಿಗೆ ಶಾಕಿಂಗ್ ಸುದ್ದಿ.. 400ರ ಗಡಿ ಮುಟ್ಟಿದ ಬೆಳ್ಳುಳ್ಳಿ ಬೆಲೆ!

ದಿನದಿಂದ ದಿನಕ್ಕೆ ಬೆಳ್ಳುಳ್ಳಿಯ ಬೆಲೆ ಗಗನಕ್ಕೆ ಏರುತ್ತಿದ್ದು, ಸದ್ಯ 400ರ ಗಡಿ ಮುಟ್ಟಿದೆ.‌ ಅಕಾಲಿಕ ಮಳೆಗೆ ಬೆಳೆ ಹಾನಿಯಾಗಿರುವ ಕಾರಣ ಸರಿಯಾದ ಬೆಳೆ ಬಾರದ ಪರಿಣಾಮ ಬೆಳ್ಳುಳಿಯ ಬೆಲೆ ಏರಿಕೆಯಾಗಿದೆ.

ಒಂದು ಕೆಜಿ ಬೆಳ್ಳುಳ್ಳಿಯ ಬೆಲೆ 380 ರೂಗೆ ಏರಿಕೆ ಕಂಡಿದೆ. ಈ ಬೆಲೆ ಕೇಳಿ ಗ್ರಾಹಕರಂತೂ ಶಾಕ್ ಆಗಿದ್ದಾರೆ. ಇಷ್ಟು ದಿನಗಳ ಕಾಲ ನಾಸಿಕ್ ನಿಂದ ಬೆಳ್ಳುಳ್ಳಿಯನ್ನ ರಫ್ತು ಮಾಡಿಕೊಳ್ಳಲಾಗುತ್ತಿತ್ತು. ಆದ್ರೆ ನಾಸಿಕ್ ಮತ್ತು ಪುನಾದಿಂದ ಬರುವ ಆಮದು ಕಡಿಮೆಯಾಗಿದ್ದು, ಸದ್ಯ ಮಧ್ಯ ಪ್ರದೇಶ, ಗುಜರಾತ್, ರಾಜಸ್ತಾನ್ ನಿಂದ ಬೆಳ್ಳುಳ್ಳಿಯನ್ನ ರಫ್ತು ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಸಾಗಾಣೆ ವೆಚ್ಚವನ್ನ ಹೇರಿಕೆ ಮಾಡುತ್ತಿದ್ದಾರೆ.

ಈ ಹಿಂದೆ 25 ರಿಂದ 30 ಚೀಲ ಲಾರಿಗಳಲ್ಲಿ ಮಾಲೂ ಪೂರೈಕೆಯಾಗುತ್ತಿತ್ತು. ಆದರೆ ಇದೀಗ 9 ರಿಂದ 10 ಲೋಡ್ ಗಳು ಬರುವುದು ಕಷ್ಟವಾಗಿರುವ ಕಾರಣ ಬೆಳ್ಳುಳ್ಳಿಯ ಬೆಲೆ ಏರಿಕೆಯಾಗಿದೆ. ಹೀಗಾಗಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ಸದ್ಯ ಬೆಳ್ಳುಳ್ಳು ಖರೀದಿ ಮಾಡ್ಬೇಕು ಅಂದ್ರೆ ಒಮ್ಮೆ ಯೋಜನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.‌ ಇದರ ನಡುವೆ ಈರುಳ್ಳಿ ಬೆಲೆ ಕೂಡ ಸೈಲೆಂಟ್ ಆಗಿಯೇ ಮತ್ತೆ ಏರಿಕೆಯಾಗುತ್ತಿದೆ. ಇಂದಿನ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿಗೆ 50 ರೂಪಾಯಿ ಆಗಿದ್ದು, ವ್ಯಾಪಾರಸ್ಥರು ಮುಂದಿನ ದಿನದಲ್ಲಿ ಮತ್ತೆ ಏರಿಕೆಯಾಗಲಿದೆ ಎಂದು ಹೇಳುತ್ತಿದ್ದಾರೆ.

You cannot copy content from Baravanige News

Scroll to Top