ರಾಜ್ಯದಲ್ಲಿ ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ: 6 ಲಕ್ಷ ರೂ ಮೌಲ್ಯದ ಬೆಳ್ಳುಳ್ಳಿ ಕಳವು

ಚಿತ್ರದುರ್ಗ, ಡಿ.13: ರಾಜ್ಯದಲ್ಲಿ ಬೆಳ್ಳುಳ್ಳಿ ದರ ಹೆಚ್ಚಾಗುತ್ತಿದ್ದು ಕೆಜಿಗೆ ಸುಮಾರು 300 ರೂ ತಲುಪುತ್ತಿದ್ದಂತೆಯೇ ವಿವಿದೆಡೆ ಬೆಳ್ಳುಳ್ಳಿ ಕಳ್ಳತನ ಪ್ರಕರಣಗಳು ನಡೆಯುತ್ತಿದೆ. ದಂಡಿನ ಕುರುಬರಹಳ್ಳಿ ಗ್ರಾಮದ ಬಳಿಯ ಗೋದಾಮಿನಲ್ಲಿ ಕಳ್ಳತನವೊಂದು ನಡೆದಿದೆ.

ಚಿತ್ರದುರ್ಗ ತಾಲೂಕಿನಲ್ಲಿರುವ ದಂಡಿನ ಕುರುಬರಹಳ್ಳಿ ಗ್ರಾಮದ ಬಳಿಯ ಗೋದಾಮಿನಲ್ಲಿ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ.

ಸುಮಾರು 6 ಲಕ್ಷ ರೂ. ಮೌಲ್ಯದ ಬೆಳ್ಳುಳ್ಳಿಯನ್ನು ಕಳ್ಳರು ಕದ್ದಿರುವಂತಹ ಘಟನೆ ನಡೆದಿದೆ.

ಜಯಶೀಲರೆಡ್ಡಿ ಎಂಬುವರ ಗೋದಾಮಿನಲ್ಲಿದ್ದ ಬೆಳ್ಳುಳ್ಳಿಯನ್ನು ಕಳ್ಳರು ಕದ್ದೊಯ್ದಿದ್ದಾರೆ. ವ್ಯಾಪಾರಿ ಬಸವ ಕಿರಣ್​​ಗೆ ಸೇರಿದ ಬೆಳ್ಳುಳ್ಳಿ ಇದಾಗಿತ್ತು. ​ಮಧ್ಯ ಪ್ರದೇಶದಿಂದ ಖರೀದಿಸಿ ತಂದು ಗೋದಾಮಿನಲ್ಲಿರಿಸಿದ್ದರು. ಈ ಬಗ್ಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top