ಸ್ನೇಹಿತರ ಜೊತೆ ಸಲುಗೆಯಿಂದ ಇರು ಎಂದು ಒತ್ತಾಯ.. ಗಂಡನ ವಿರುದ್ಧ ಹೆಂಡತಿ ಪೊಲೀಸ್ ಕೇಸ್!

ಬೆಂಗಳೂರು : ಇತ್ತೀಚೆಗೆ ಕೇರಳದಲ್ಲಿ ಭಾರೀ ಸದ್ದು ಮಾಡಿದ್ದ ವೈಫ್ ಸ್ವಾಪ್ ಕೇಸ್ಗಳು ಈಗ ಬೆಂಗಳೂರಿಗೂ ಕಾಲಿಟ್ಟಿವೆ. ಸಿಲಿಕಾನ್ ಸಿಟಿಯಲ್ಲೂ ವೈಫ್ ಸ್ವಾಪ್ ವರದಿಯಾಗುತ್ತಿದ್ದು, ಗಂಡನ ವಿರುದ್ಧ ಹೆಂಡತಿಯೇ ಆರೋಪ ಮಾಡಿದ್ದಾಳೆ.

ತನ್ನ ಸ್ನೇಹಿತರ ಜತೆ ಸಲುಗೆಯಿಂದ ಇರುವಂತೆ ಗಂಡ ಒತ್ತಾಯಿಸಿದ್ದ ಎಂದು ಹೆಂಡತಿ ದೂರು ನೀಡಿದ್ದಾಳೆ. ಪೂರ್ಣಚಂದ್ರ ಎಂಬಾತ ತನ್ನ ಹೆಂಡತಿಗೆ ಫೋರ್ಸ್ ಮಾಡಿದ್ದಾನೆ. ಒಪ್ಪದಿದ್ದಕ್ಕೆ ಗಂಡನ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ. ಹೀಗಾಗಿ ಗಂಡನ ವಿರುದ್ಧವೇ ಹೆಂಡತಿ ದೂರು ಕೊಟ್ಟಿದ್ದಾಳೆ. ಸದ್ಯ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಗಂಡ ಮತ್ತಾತನ ಕುಟುಂಬದ ವಿರುದ್ಧ ಎಫ್ಐಆರ್ ಮಾಡಲಾಗಿದೆ.

ಏನಿದು ವೈಫ್ ಸ್ವಾಪ್..?

ಹಲವು ದೇಶಗಳಲ್ಲಿ ವೈಫ್ ಸ್ವಾಪ್ ಅನ್ನೋದು ಒಂದು ಕೆಟ್ಟ ಸಂಸ್ಕೃತಿ. ಇದರರ್ಥ ಹೆಂಡತಿಗೆ ತನ್ನ ಸ್ನೇಹಿತರೊಂದಿಗೆ ಸಲುಗೆಯಿಂದ ಇರುವಂತೆ ಒತ್ತಾಯಿಸುವುದು. ಅಥವಾ ಸ್ನೇಹಿತರ ಹೆಂಡತಿಗೆ ಇವನು ಗಂಡನ ಹಾಗೇ ಇರುವುದು. ಈ ರೀತಿ ಕೇಸುಗಳು ಇತ್ತೀಚೆಗೆ ಸದ್ದು ಮಾಡುತ್ತಿವೆ.

You cannot copy content from Baravanige News

Scroll to Top