ಹೆಣ್ಣು ಹೆತ್ತು ಕೊಳವೆ ಬಾವಿಗೆ ಎಸೆದು ಹೋದ ಪಾಪಿಗಳು; ಆದರೆ ಶಿಶುವಿನ ಅದೃಷ್ಟ ಚೆನ್ನಾಗಿತ್ತು..

ಒಡಿಶಾ : ಕೊಳವೆ ಬಾವಿಯಲ್ಲಿ ಸಿಲುಕಿದ್ದ ನವಜಾತ ಹೆಣ್ಣು ಶಿಶುವನ್ನು ಸತತ 5 ಗಂಟೆ ಕಾಲ ಕಾರ್ಯಚರಣೆ ನಡೆಸಿ ರಕ್ಷಿಸಿರುವ ಘಟನೆ ಒಡಿಶಾದ ಸಂಬಲ್‌ಪುರದಲ್ಲಿ ನಡೆದಿದೆ.

ಮಹಿಳೆಯೊಬ್ಬರು ಹೆಣ್ಣು ಶಿಶುವನ್ನು ಕೊಳವೆ ಬಾವಿಯಲ್ಲಿ ಎಸೆದು ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದ್ದು, ಮಗುವಿನ ಕಿರುಚಾಟ ಕೇಳಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ, 20 ಅಡಿ ಆಳದಲ್ಲಿದ್ದ ಶಿಶುವಿಗೆ ಆಕ್ಸಿಜೆನ್ ಪೂರೈಸಿ, ಜೆಸಿಬಿ ಯಂತ್ರದ ಮೂಲಕ ಸತತ 5 ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಶಿಶುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಕೂಡಲೇ ಆಸ್ಪತ್ರೆಗೆ ದಾಖಲಿಸಿ ಶಿಶುವಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕೊಳವೆ ಬಾವಿಗೆ ಎಸೆದು ಹೋದ ಸಂಬಂಧ ತನಿಖೆ ಶುರುವಾಗಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಅನ್ನೊ ಒತ್ತಾಯ ಕೇಳಿಬಂದಿದೆ.

You cannot copy content from Baravanige News

Scroll to Top