ಮಲೆಯಾಳಂ ನಿರ್ದೇಶಕಿ ಸಿನೆಮಾದಲ್ಲಿ ರಾಕಿಂಗ್ ಸ್ಟಾರ್ ಯಶ್….2025ಕ್ಕೆ ತೆರೆಗೆ ಬರಲಿದೆ ಟಾಕ್ಸಿಕ್

ಬೆಂಗಳೂರು : ಕೆಜಿಎಫ್ ಸಿನೆಮಾ ಬಂದು ವರ್ಷಗಳ ಬಳಿಕ ಇದೀಕ ರಾಕಿಂಗ್ ಸ್ಟಾರ್ ಯಶ್ ಅವರ ನೂತನ ಸಿನೆಮಾದ ಟೈಟಲ್ ರೀವಿಲ್ ಆಗಿದೆ. ಯಶ್ ಮುಂದಿನ ಚಿತ್ರದ ಹೆಸರು ‘ಟಾಕ್ಸಿಕ್’. 2025ರ ಏಪ್ರಿಲ್ 10ರಂದು ಚಿತ್ರ ತೆರೆಗೆ ಬರಲಿದೆ. ಮಲಯಾಳಂನ ಖ್ಯಾತ ನಟಿ, ನಿರ್ದೇಶಕಿ ಗೀತು ಮೋಹನ್ ದಾಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಕೆವಿಎನ್‌ ಪ್ರೊಡಕ್ಷನ್ಸ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಹೊಸ ಪ್ರಾಜೆಕ್ಟ್‌ ಯಶ್ ಅವರ 19ನೇ ಸಿನಿಮಾವಾಗಿದೆ. ಒಂದು ಆಕರ್ಷಕ ವಿಡಿಯೊ ತುಣುಕಿನ ಮೂಲಕ ಚಿತ್ರದ ಟೈಟಲ್ ಅನ್ನು ಯಶ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ರಿವೀಲ್ ಮಾಡಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಯಶ್‌, ‘ನೀವು ಕೊಟ್ಟಿರುವ ಯಶಸ್ಸನ್ನು ಜವಾಬ್ದಾರಿ ಎಂದು ತಿಳಿದುಕೊಂಡು ಮುಂದಿನ ಹಂತಕ್ಕೆ ಹೆಜ್ಜೆ ಇಟ್ಟಿದ್ದೇನೆ. ನಾನು ಯಾವತ್ತೂ ಈ ಹಬ್ಬಕ್ಕೆ ಘೋಷಣೆ, ಆ ತಿಂಗಳಲ್ಲಿ ಘೋಷಣೆ ಎಂದಿರಲಿಲ್ಲ. ಅಡುಗೆ ಬೆಂದ ಮೇಲೆಯೇ ಬಡಿಸಬೇಕು. ಕೊಂಚ ತಾಳ್ಮೆ ಇರಲಿ’ ಎಂದಿದ್ದರು.

You cannot copy content from Baravanige News

Scroll to Top