ತಾಳಿ ಕಟ್ಟುವಾಗ್ಲೇ ಕೈ ಅಡ್ಡ ಹಿಡಿದ ವಧು : ಮುರಿದು ಬಿದ್ದ ಮದ್ವೆ

ಚಿತ್ರದುರ್ಗ : ತಾಳಿ ಕಟ್ಟುವ ವೇಳೆ ವಧು ನನಗೆ ಮದುವೆ ಬೇಡ ಎಂದು ಹೇಳುವುದನ್ನು ಸಿನಿಮಾ ಹಾಗೂ ಸೀರಿಯಲ್ನಲ್ಲಿ ನೋಡಿರುತ್ತೇವೆ. ಅದೇ ರೀತಿ ನಿಜ ಜೀವನದಲ್ಲಿ ನಡೆದರೆ ಹೇಗಿರುತ್ತೆ? ಹೌದು, ಸಿನಿಮೀಯ ಸ್ಟೈಲ್ನಲ್ಲಿ ನಡೆದ ಹಾಗೇ ಮದುವೆ ಮಂಟಪದಲ್ಲಿ ಕುಳಿತಿದ್ದ ವಧುವಿಗೆ ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಆಕೆ ನನಗೆ ಮದುವೆ ಬೇಡ ಎಂದು ಹೇಳಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾಳೆ.

ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ಆರತಕ್ಷತೆಯ ವೇಳೆ ಚೆನ್ನಾಗಿಯೇ ಇದ್ದ ವಧು ಏಕಾಏಕಿ ನನಗೆ ಮದುವೆ ಬೇಡ ಎಂದು ಹೇಳಿದ್ದಾಳೆ. ನಾನಿನ್ನು ಓದಬೇಕು ಎಂಬ ಕಾರಣ ಹೇಳಿದ್ದಾಳೆ. ಅಲ್ಲೇ ನಿಂತುಕೊಂಡಿದ್ದ ವಧು ಪೋಷಕರು ಎಷ್ಟೇ ಹೇಳಿದ್ರೂ ತಾಳಿ ಕಟ್ಟಿಸಿಕೊಳ್ಳದೆ ಅಲ್ಲಿಂದ ಎದ್ದು ಹೋಗಿದ್ದಾಳೆ. ಹೀಗಾಗಿ ವಧು ಒಪ್ಪದ ಹಿನ್ನೆಲೆ ಮದುವೆ ಮುರಿದು ಬಿದಿದ್ದೆ.

ಚಿಕ್ಕಬ್ಯಾಲದಕೆರೆಯ ಸಂತೋಷ ಸಿ.ಎಲ್ ಹಾಗೂ ಚಳ್ಳಕೆರೆ ತಾಲೂಕಿನ ತಿಪ್ಪರೆಡ್ಡಿಹಳ್ಳಿಯ ಯಮುನಾ ಜಿ.ಎಂ ಮದುವೆ ನಿಶ್ಚಯ ಆಗಿತ್ತು. ಹೀಗಾಗಿ ಚಿಕ್ಕಬ್ಯಾಲದಕೆರೆಯ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ಜರುಗುತ್ತಿತ್ತು. ಇದೇ ವೇಳೆ ವಧು ತಾಳಿ ಕಟ್ಟಿಸಿಕೊಳ್ಳಲು ನಿರಾಕರಣೆ ಮಾಡಿದ್ದಕ್ಕೆ ಮದುವೆ ಮುರಿದು ಬಿದ್ದಿದೆ.

ಮದುವೆಯಲ್ಲಿ ನಡೆಯುವ ಹೈಡ್ರಾಮಾಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತದೆ. ಈ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

You cannot copy content from Baravanige News

Scroll to Top