‘ಎಂಟು ಬಾರಿ ಅಂಬಾರಿ ಹೊತ್ತ ಅರ್ಜುನ ಆನೆಗೆ ಸ್ಮಾರಕ ನಿರ್ಮಾಣ’ – ಈಶ್ವರ್ ಖಂಡ್ರೆ

ಬೆಳಗಾವಿ: ರಾಷ್ಟ್ರಕ್ಕೆ ಹೆಮ್ಮೆ ತಂದಂತಹ ಸುಮಾರು 8 ಬಾರಿ ದಸರಾ ಹಬ್ಬ ಯಶಸ್ಸಿಗೆ ಕಾರಣವಾದಂತಹ ಅರ್ಜುನ ಎಂಬ ಆನೆಯು ಮದಗಜಗಳ ಕಾದಾಟದಲ್ಲಿ ವೀರಮರಣ ಹೊಂದಿದ ಅರ್ಜುನ ಆನೆಗೆ ಹಾಸನ ಹಾಗೂ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಸುವರ್ಣ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಿಎಂ ಜೊತೆ ಚರ್ಚೆ ಮಾಡಲಾಗಿದೆ. ಎಂಟು ಬಾರಿ ಅಂಬಾರಿ ಹೊತ್ತ ಅರ್ಜುನ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಈಗಲೇ ಹೇಳಲು ಆಗುವುದಿಲ್ಲ. ಇಂತಹ ಕಾರ್ಯಾಚರಣೆಗಳಲ್ಲಿ ಸುಮಾರು ಅರಣ್ಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಅಪಾಯ ಇದೆ ಎಂದು ತಿಳಿದರು ಸಾರ್ವಜನಿಕರ ಆಸ್ತಿ, ಜೀವ ರಕ್ಷಣೆಗೆ ಸೇವೆ ಮಾಡುತ್ತಾರೆ.ಇಂಥ ಪರಿಸ್ಥಿತಿಯಲ್ಲಿ ಹೀಗೆ ಆಗಿದೆ ಎನ್ನುವುದಕ್ಕಿಂತ ಹೇಗೆ ಆಗಿದೆ ಎಂದು ಪರಿಶೀಲಿಸಲಾಗುವುದು ಈಗಲೇ ಈ ಬಗ್ಗೆ ಹೇಳಲು ಆಗುವುದಿಲ್ಲ. ತನಿಖಾ ವರದಿ ಬಂದ ಮೇಲೆ ಲೋಪದೋಷಗಳಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಲ್ಲಾ ವಿಷಯಗಳ ಬಗ್ಗೆ ತನಿಖಾ ವರದಿ ಬರುತ್ತದೆ . ಪ್ರಜಾಪ್ರಭುತ್ವದಲ್ಲಿ ಲಾಠಿ ಚಾರ್ಜ್ ಆಗಬಾರದು. ಜನರು ಸಂಯಮ ಶಾಂತಿಯಿಂದ ಇರಬೇಕು. ಜನರು ಶಾಂತಿ ಕಾಪಾಡಬೇಕು. ಅರ್ಜುನನ ಅಗಲಿಕೆ ರಾಜ್ಯಕ್ಕೆ ದುಃಖ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

You cannot copy content from Baravanige News

Scroll to Top