ಕಾರ್ಕಳ: ಬೈಕ್ ಗೆ ಗೂಡ್ಸ್ ಟೆಂಪೋ ಡಿಕ್ಕಿ; ಸವಾರ ಸಾವು

ಕಾರ್ಕಳ, ಡಿ 05: ಈದು ಗ್ರಾಮದ ಮಂಗಳಾ ಫಾರ್ಮ್ ಬಳಿ ಬೈಕಿಗೆ ಗೂಡ್ಸ್ ಟೆಂಪೋ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದ ಘಟನೆ ಈದು ಗ್ರಾಮದ ಮಂಗಳಾ ಫಾರ್ಮ್ ಬಳಿ ಸೋಮವಾರ ರಾತ್ರಿ ನಡೆದಿದೆ.

ಅಪಘಾತದಲ್ಲಿ ಮುತ್ತಯ್ಯ ನಲ್ಕೆ(55) ಎಂಬವರು ಮೃತಪಟ್ಟವರು.

ಈದುವಿನ ಮಂಗಳಾ ನರ್ಸರಿ ಬಳಿ ಮುತ್ತಯ್ಯ ಎಂಬವರು ತನ್ನ ಬೈಕಿನಲ್ಲಿ ರಾತ್ರಿ 8.25ರ ವೇಳೆಗೆ ಮನೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಟೆಂಪೋ ಚಾಲಕ ಸತೀಶ್ ಎಂಬಾತ ತನ್ನ ವಾಹನವನ್ನು ವೇಗವಾಗಿ ಚಲಾಯಿಸಿ ರಸ್ತೆಯ ತೀರಾ ಬಲಭಾಗದಲ್ಲಿ ಚಲಾಯಿಸಿ ಮುತ್ತಯ್ಯನವರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top