ರ‍್ಯಾಪಿಡೋ ಆಟೋ ಚಾಲಕನಿಂದ ಮಹಿಳೆಗೆ ಲೈಂಗಿಕ ದೌರ್ಜನ್ಯ : ಆರೋಪಿ ಅರೆಸ್ಟ್..!!

ಬೆಂಗಳೂರು : ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ರ‍್ಯಾಪಿಡೋ ಆಟೋ ಚಾಲಕನನ್ನು ಬೆಂಗಳೂರು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ತಾನು ಮಾಡಿದ ತಪ್ಪು ಒಪ್ಪಿಕೊಂಡ ಕಾರಣ ವಾರ್ನಿಂಗ್ ಕೊಟ್ಟು ಬೇಲ್ ಮೇಲೆ ಬಿಟ್ಟು ಕಳಿಸಲಾಗಿದೆ.

ಇನ್ನು, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 350ರ ಅಡಿಯಲ್ಲಿ ಕೇಸ್ ಮಾಡಲಾಗಿದೆ. ಸಿಆರ್ಪಿಸಿ 41(A) ಅಡಿಯಲ್ಲಿ ವಿಚಾರಣೆಗೆ ಹಾಜರಾಗು ಎಂದು ನೋಟಿಸ್ ಕೂಡ ನೀಡಲಾಗಿದೆ.

ಏನಿದು ಆರೋಪ..?

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ರ‍್ಯಾಪಿಡೋ ಆಟೋ ಚಾಲಕನ ವಿರುದ್ಧ ಕೇಳಿ ಬಂದಿತ್ತು. ಈ ಸಂಬಂಧ ಅಂಕೂರ್ ಎಂಬುವರು ಟ್ವೀಟ್ ಮಾಡಿದ್ದು, ಕೂಡಲೇ ಕಾಮುಕನನ್ನು ಬಂಧಿಸಿ ಎಂದು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಕಳೆದ ರಾತ್ರಿ ನನ್ನ ಸ್ನೇಹಿತೆಯೊಂದಿಗೆ ರ‍್ಯಾಪಿಡೋ ಆಟೋ ಚಾಲಕ ಅಸಭ್ಯವಾಗಿ ವರ್ತಿಸಿದ್ದಾನೆ. ಸಿಕ್ಕ ಸಿಕ್ಕ ಕಡೆ ಕೆಟ್ಟದಾಗಿ ಮುಟ್ಟಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಆಟೋದಿಂದಲೇ ಹೊರಕ್ಕೆ ದೂಡಿದ್ದಾನೆ. ನಾವು ರ‍್ಯಾಪಿಡೋ ಟೀಂಗೆ ಇದರ ಬಗ್ಗೆ ದೂರು ನೀಡಿದಾಗ ಇವ್ರು ಜಸ್ಟ್ ಕ್ಷಮೆ ಕೇಳಿದ್ರು. ಈ ಕೂಡಲೇ ಪೊಲೀಸ್ರು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ ಅಂಕೂರ್.

You cannot copy content from Baravanige News

Scroll to Top