ಕುಂದಾಪುರ : ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಕುಂಭಾಸಿ ಇವರ ನೇತೃತ್ವದಲ್ಲಿ ಕುಂದಾಪುರ ಭಜನಾ ಮಂಡಳಿಗಳ ಸಹಯೋಗದಲ್ಲಿ ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆ ಡಿಸೆಂಬರ್ 03, ಭಾನುವಾರ ಆನೆಗುಡ್ಡೆ ದೇವಸ್ಥಾನದಲ್ಲಿ ನಡೆಯಲಿದೆ.
ಬೆಳಗ್ಗೆ 8 ಕ್ಕೆ ಭವ್ಯ ಪುರ ಮೆರವಣಿಗೆ ನಡೆದ ಬಳಿಕ ಚಿತ್ರಾಪುರ ಮತ ಸುರತ್ಕಲ್ ನ ವಿದ್ಯೇಂದ್ರ ತೀರ್ಥ ಶ್ರೀಪಾದರು ಶುಭ ಆಶೀರ್ವಚನ ನೀಡಲಿದ್ದಾರೆ.9 ಗಂಟೆಗೆ ಭಜನಾ ಸ್ಪರ್ಧೆ ಆರಂಭವಾಗಲಿದೆ. ಬೆಳಗ್ಗೆ 10 ಗಂಟೆಗೆ ಭಕ್ತಿ ಗಾನ ನೃತ್ಯ ಜೋಡಿ ಭಜನಾ ಸ್ಪರ್ಧೆ ಆರಂಭವಾಗಲಿದೆ.
ರಾಜ್ಯ ಮಟ್ಟದ48 ಭಜನಾ ಮಂಡಳಿಗಳಲ್ಲಿ ಒಂದು ತಂಡ ರಾಜ್ಯ ಮಟ್ಟದ ಕೀರ್ತಿಯನ್ನು ಗಳಿಸಲಿದ್ದು, ಉಳಿದ ಐದು ತಂಡಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.