ದುಬಾರಿ ಬೆಲೆಯ ನಾಯಿಮರಿ ಕೊಡಿಸುವಂತೆ ಪೀಡಿಸುತ್ತಿದ್ದ ಮಗನಿಂದ ಮನೆ ಬಿಟ್ಟ ತಾಯಿ ; ಮಗ ಆತ್ಮಹತ್ಯೆ

ಹುಬ್ಬಳ್ಳಿ : ಯುವಕನೋರ್ವ ನಾಯಿ ಪ್ರೀತಿಗೆ ಬಲಿಯಾದ ಘಟನೆ ಹುಬ್ಬಳ್ಳಿಯ ಮಿಷನ್ ಕಾಪೌಂಡ್‌ನಲ್ಲಿ ನಡೆದಿದೆ.

ಅಲೆನ್ ವಿನೋದ್ ಭಸ್ಮೆ (24) ಆತಹತ್ಯೆಗೆ ಶರಣಾದ ಯುವಕ.

ಅಲೆನ್ ವಿನೋದ್ ಭಸ್ಮೆ ಎರಡು ಲಕ್ಷ ಮೌಲ್ಯದ ನಾಯಿಮರಿ ಕೊಡಿಸುವಂತೆ ತಾಯಿಯ ಬಳಿ ಹಠ ಮಾಡಿದ್ದನು. ಮಗನ ಕಾಟಕ್ಕೆ ಬೇಸತ್ತು ತಾಯಿ ಮನೆ ಬಿಟ್ಟು ಹೋಗಿದ್ದಳು.

ತಾಯಿ ಮನೆ ಬಿಟ್ಟು ಹೋಗಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.

ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top