Monday, July 15, 2024
Homeಸುದ್ದಿರಾಜ್ಯಪ್ರೀತಿಸಿದಂತೆ ನಾಟಕ, ಲೈಂಗಿಕವಾಗಿ ಬಳಸಿಕೊಂಡ ಯುವಕ ; ಠಾಣೆ ಮೆಟ್ಟಿಲೇರಿದ ಇಬ್ಬರು ಯುವತಿಯರು

ಪ್ರೀತಿಸಿದಂತೆ ನಾಟಕ, ಲೈಂಗಿಕವಾಗಿ ಬಳಸಿಕೊಂಡ ಯುವಕ ; ಠಾಣೆ ಮೆಟ್ಟಿಲೇರಿದ ಇಬ್ಬರು ಯುವತಿಯರು

ಹಾಸನ : ಯುವಕನೋರ್ವ ಪ್ರೀತಿಸಿ ಲೈಂಗಿಕವಾಗಿ ಬಳಸಿಕೊಂಡು ಹಲವು ಯುವತಿಯರಿಗೆ ಚಿತ್ರಹಿಂಸೆ ನೀಡಿರುವ ಘಟನೆಯೊಂದು ಮುನ್ನೆಲೆಗೆ ಬಂದಿದೆ.

ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯ ಶರತ್‌ ಆರೋಪಿ ಯುವಕ.

ಭೂಮಿಕಾ ಮತ್ತು ಹುದಾ ಎಂಬವರು ಪ್ರಿಯಕರನಿಂದ ಲೈಂಗಿಕ ಹಾಗೂ ದೈಹಿಕ ದೌರ್ಜನ್ಯಕ್ಕೆ ಒಳಗಾದ ಯುವತಿಯರಾಗಿದ್ದು, ಶರತ್ ಮೂರು ವರ್ಷದಿಂದ ಹುದಾಳನ್ನು ಪ್ರೀತಿಸುವ ನಾಟಕವಾಡಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಹುದಾಳಿಂದ ಹಣ, ಒಡವೆ ಪಡೆದಿದ್ದಾನೆ.

ಅತ್ತ ಶರತ್ ಸಕಲೇಶಪುರ ತಾಲ್ಲೂಕಿನ, ಕುಡುಗರಹಳ್ಳಿ ಕಾಲೇಜಿನಲ್ಲಿ ಭೂಮಿಕಾಗೂ ಪರಿಚಯವಾಗಿದ್ದ. ಫೋನ್ ನಂಬರ್ ಪಡೆದು ನಯವಾಗಿ ಮಾತನಾಡಿ ಭೂಮಿಕಾಳ ಜೊತೆಗೂ ಪ್ರೀತಿ ನಾಟಕವಾಡಿದ್ದ. ಇದನ್ನು ಕಂಡು ಭೂಮಿಕಾ ಹುದಾಳ ಇನ್ಸ್ಟಾಗ್ರಾಂನಲ್ಲಿ ಟ್ಯಾಗ್ ಮಾಡಿದ್ದಳು.

ಭೂಮಿಕಾ ಶಿವಮೊಗ್ಗ ಮೂಲದವಳಾಗಿದ್ದು, ಹುದಾ ಟ್ಯಾಗ್ ನೋಡಿದ ಬಳಿಕ ಶರತ್‌ನನ್ನು ಭೂಮಿಕಾ ಪ್ರಶ್ನೆ ಮಾಡಿದ್ದಾಳೆ. ನಂತರ ಭೂಮಿಕಾಗೆ ವಿಡಿಯೋ ಕಾಲ್ ಮಾಡಿ ಹುದಾಗೆ ಶರತ್ ಮನಬಂದಂತೆ ಥಳಿಸಿದ್ದಾನೆ. ಶರತ್ ದೌರ್ಜನ್ಯವೆಸಗಿದ ದೃಶ್ಯವನ್ನು ಭೂಮಿಕಾ ರೆಕಾರ್ಡ್ ಮಾಡಿದ್ದಾಳೆ. ನಂತರ ಪೊಲೀಸ್ ಠಾಣೆಗೆ ತೆರಳಿ ಭೂಮಿಕಾ ದೂರು ನೀಡಿದ್ದಾಳೆ.

ಇತ್ತ ಭೂಮಿಕಾಳನ್ನು ಶರತ್ ಲೈಂಗಿಕವಾಗಿ ಬಳಸಿಕೊಂಡು ಹಣ, ಒಡವೆ ಪೀಕಿದ್ದಾನೆ. ಹೀಗಾಗಿ ಶರತ್ ವಿರುದ್ಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಸಕಲೇಶಪುರ ಗ್ರಾಮಾಂತರ ಪೊಲೀಸರು ಶರತ್ನನ್ನು ಬಂಧಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News