ಹಾಸನ : ಬೆಳ್ಳಂಬೆಳಿಗ್ಗೆಯೇ ಶಾಲಾ ಶಿಕ್ಷಕಿಯನ್ನು ಅಪಹರಿಸಿದ ಪ್ರಕರಣ ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ನಡೆದಿದೆ.
ಮದುವೆ ಒಪ್ಪಂದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ದುರುಳರು ಯುವತಿಯನ್ನೇ ಅಪರಿಸಿದ್ದಾರೆ.
ಶಿಕ್ಷಕಿ ಅರ್ಪಿತಾ ಬೆಳಿಗ್ಗೆ ಶಾಲೆಗೆ ತೆರಳಲು ಸಿದ್ಧವಾಗಿದ್ದಳು. ಈ ವೇಳೆ ದುರುಳರು ಆಕೆಯನ್ನು ಅಪಹರಣ ಮಾಡಿದ್ದಾರೆ. ಅರ್ಪಿತಾ ಸಂಬಂಧಿ ರಾಮು ಎಂಬಾತನಿಂದಲೇ ಈ ಕೃತ್ಯ ನಡೆದಿದೆ ಎಂದು ಯುವತಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಹದಿನೈದು ದಿನಗಳ ಹಿಂದೆ ರಾಮು ಮತ್ತು ಪೋಷಕರು ಮದುವೆ ಪ್ರಸ್ತಾಪದೊಂದಿಗೆ ಯುವತಿ ಮನೆಗೆ ಬಂದಿದ್ದರು. ಮದುವೆ ಮಾಡಿಕೊಡಲು ಒಪ್ಪದ ಹಿನ್ನೆಲೆಯಲ್ಲಿ ಯುವತಿಯನ್ನೇ ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.