ಕೊಟ್ಟಿಗೆ ಕಟ್ಟಲು ಲೋನ್ ಕೊಡದೆ ಸತಾಯಿಸುತ್ತಿದ್ದ ಪಿಡಿಒ; ಪಂಚಾಯತಿ ಒಳಗೆ ದನ ಕಟ್ಟಿಹಾಕಿ ಪ್ರತಿಭಟಿಸಿದ ರೈತ

ತುಮಕೂರು : ದನದ ಕೊಟ್ಟಿಗೆ ನಿರ್ಮಿಸಲು ಲೋನ್ ನೀಡದ್ದಕ್ಕೆ ರೈತನೋರ್ವ ವಿನೂತನ ಪ್ರತಿಭಟನೆ ನಡೆಸಿದ ಘಟನೆ ತುಮಕೂರಿನ ಸಾಸಲುಕುಂಟೆ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.


ಗೋಪಾಲಯ್ಯ ಎಂಬ ರೈತ ಗ್ರಾಮ ಪಂಚಾಯತಿ ಕಚೇರಿ ಒಳಗೆ ಹಸು ಕಟ್ಟಿ ಪ್ರತಿಭಟಿಸಿದ್ದಾನೆ.

ಸಾಸಲುಕುಂಟೆ ಪಂಚಾಯತಿ ಪಿಡಿಒ ಕೊಟ್ಟಿಗೆ ಕಟ್ಟಲು ಲೋನ್ ಕೊಡದೆ 4 ವರ್ಷದಿಂದ ಸತಾಯಿಸುತ್ತಿದ್ದು, ಇದರಿಂದ ಬೇಸತ್ತ ರೈತ ತಕ್ಕ ಉತ್ತರ ನೀಡಿದ್ದಾನೆ. ಹಸುಗಳನ್ನ ಪಂಚಾಯತಿ ಒಳಗೆ ತಂದು ಕಟ್ಟಿದ್ದಾನೆ.

ರೈತ ಗೋಪಾಲಯ್ಯ ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಿಸಿಕೊಳ್ಳಲು ಅರ್ಜಿ ಹಾಕಿದ್ದನು. ಹೀಗಾಗಿ ಗ್ರಾಮ ಪಂಚಾಯತ್ಗೆ ನಾಲ್ಕು ವರ್ಷಗಳಿಂದ ಅಲೆಯುತ್ತಿದ್ದಾನೆ. ಪ್ರಭಾವಿಗಳ ಮನೆ ಬಾಗಿಲಿಗೆ ಹೋಗಿ ಬಿಲ್ ಮಾಡಿಕೊಡಲಾಗುತ್ತೆ. ಬಡವರನ್ನ ಹೀಗೆ ಅಲೆದಾಡಿಸುವ ಇವರನ್ನು ಹೇಳುವವರು ಕೇಳುವವರು ಯಾರೂ ಇಲ್ಲ ಎಂದು ರೈತ ಗೋಪಾಲಯ್ಯ ಆಕ್ರೋಶ ಹೊರಹಾಕಿದ್ದಾರೆ.

Scroll to Top