Monday, July 15, 2024
Homeಸುದ್ದಿಕುಂದಾಪುರ: ತಹಸಿಲ್ದಾರ್ ಶೋಭಾ ಲಕ್ಷ್ಮಿ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕಂದಾಯ ಸಚಿವರಿಗೆ ದೂರು

ಕುಂದಾಪುರ: ತಹಸಿಲ್ದಾರ್ ಶೋಭಾ ಲಕ್ಷ್ಮಿ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕಂದಾಯ ಸಚಿವರಿಗೆ ದೂರು

ಕುಂದಾಪುರ, ನ 29: ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವ ಬಗ್ಗೆ ಆರೋಪಿಸಿ ತಹಸಿಲ್ದಾರ್ ಶೋಭಾ ಲಕ್ಷ್ಮಿಯವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅಂತರಾಷ್ಟ್ರೀಯ ಪವರ್ ಲಿಪ್ಟರ್ ಸತೀಶ್ ಖಾರ್ವಿ ಅವರು ಕಂದಾಯ ಸಚಿವ ಕೃಷ್ಣೆ ಬೈರೇಗೌಡರಿಗೆ ದೂರು ನೀಡಿದ್ದಾರೆ.

ನ.15 ರಂದು ಕಸ್ಟಾ ಗ್ರಾಮದ ಜಯಾನಂದ ಅವರು , ಎಲ್ಲಾ ದಾಖಲೆಗಳೊಂದಿಗೆ ಜಾತಿ ಪ್ರಮಾಣ ಪತ್ರವನ್ನು ರದ್ದು ಪಡಿಸುವಂತೆ ತಹಸಿಲ್ದಾರ್ ಶೋಭಾ ಲಕ್ಷ್ಮಿ ದೂರು ಸಲ್ಲಿಸಿದ್ದಾರೆ.

ಜಯಾನಂದ ಅವರ ದೂರಿನ ಅನ್ವಯ ತಹಶೀಲ್ದಾರರು ಪ್ರಕರಣ ದಾಖಲಿಸಿ ಎಲ್ಲಾ ರೀತಿಯ ಅಂದರೆ ಗ್ರಾಮ ಲೆಕ್ಕಾಧಿಕಾರಿಯವರಿಂದ ಹಿಡಿದು ಕಂದಾಯ ಅಧಿಕಾರಿಯವರಿಂದ ಎಲ್ಲಾ ರೀತಿಯ ವರದಿ ಪಡೆದುಕೊಂಡು ಜಯಾನಂದರವರು ತಂದೆ ಹೆಸರನ್ನು ತಪ್ಪಾಗಿ ನೀಡಿ ದಾಖಲೆಗಳನ್ನು ಪರಿಶೀಲಿಸಿಯೂ ಉದ್ದೇಶ ಪೂರ್ವಕವಾಗಿ ಕಾನೂನನ್ನು ಉಲ್ಲಂಘಿಸಿ ಪ್ರಾಧಿಕಾರದಲ್ಲಿ ಪ್ರಶ್ನಿಸುವಂತೆ ಆದೇಶಿಸಿದ್ದಾರೆ.

ಅಲ್ಲದೇ ಆರೋಪಿ ಜಯಾನಂದರವರ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಊರ್ಜಿತದಲ್ಲಿಸಿರುತ್ತಾರೆ. ಒಂದು ವೇಳೆ ಜಯನಂದರವರ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ರದ್ದು ಪಡಿಸಲು ಸಮಕ್ಷಮ ಪ್ರಾಧಿಕಾರ ಇವರಲ್ಲಿ ತಹಶೀಲ್ದಾರರೇ ದೂರು ಸಲ್ಲಿಸಿ ರದ್ದುಪಡಿಸುವುದು ಅವರ ಕರ್ತವ್ಯವಾಗಿರುತ್ತದೆ.

ಆದರೆ ತಹಶೀಲ್ದಾರರು ವೈಯಕ್ತಿಕವಾಗಿ ಆರೋಪಿಗೆ ಸಹಾಯ ಮಾಡುವ ಉದ್ದೇಶದಿಂದ ಈ ರೀತಿ ಆದೇಶ ಮಾಡಿರುವುದು ಕಂಡು ಬರುತ್ತದೆ. ತಾನೇ ಸರ್ವಾಧಿಕಾರಿ ಎಂದು ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅದೇ ರೀತಿ ಈ ಪ್ರಕರಣದಲ್ಲಿ ಜಯಾನಂದರವರು ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಕುಂದಾಪುರದ ಖಾರ್ವಿಕೇರಿ ಪ್ರಾಥಮಿಕ ಶಾಲೆಯಿಂದ ಒಂದು ವರ್ಗಾವಣೆ ಪತ್ರವನ್ನು ಹಾಜರುಪಡಿಸಿದ್ದನ್ನು ನಾನು ಅದರ ಬಗ್ಗೆ ಮುಖ್ಯೋಪಾಧ್ಯಾಯರವರಲ್ಲಿ ಅದರ ಪ್ರತಿಯನ್ನು ಪರಿಶೀಲಿಸುವ ಬಗ್ಗೆ ವಿಚಾರಿಸಿದಾಗ ಮುಖ್ಯೋಪಾಧ್ಯಾಯರು ಶಾಲಾ ದಾಖಲಾತಿ ರಿಜಿಸ್ಟ್ರಿಯನ್ನು ಪರಿಶೀಲಿಸಿದಾಗ ಪ್ರಮಾಣ ಪತ್ರ ಕೂಡ ತಿದ್ದಿದ್ದನ್ನು ಕಂಡು ಬಂದಿದ್ದು, ಶಾಲಾ ಮುಖ್ಯೋಪಾಧ್ಯಾಯರು ಜಯಾನಂದರಿಂದ ತಿದ್ದಿದ್ದ ವರ್ಗಾವಣೆ ಪತ್ರವನ್ನು ವಾಪಾಸು ಪಡೆದುಕೊಂಡು ತಿದ್ದಿದ ಬಗ್ಗೆ ತಹಶೀಲ್ದಾರರಿಗೆ ಮುಖ್ಯೋಪಾಧ್ಯಾಯರು ಸ್ಪಷ್ಟಿಕರಣ ನೀಡಿರುತ್ತಾರೆ.

ಶಾಲಾ ಆಡಳಿತ ಮಂಡಳಿಯ ರವರ ಪತ್ರವನ್ನು ಮತ್ತು ನಾನು ಸಲ್ಲಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ತಹಶೀಲ್ದಾರರಾಗಿ ಇನ್ನು ಮುಂದೆ ಮುಂದುವರಿಯಲು ಅನರ್ಹರು. ಅವರನ್ನು ತಹಶೀಲ್ದಾರ್‌ ಹುದ್ದೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಅಲ್ಲದೇ ಈ ಪ್ರಕರಣವು ಸಂಪೂರ್ಣ ಕಾನೂನು ಬಾಹಿರವಾಗಿದ್ದು, ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಪಡೆಯಬೇಕಾದ ದಾಖಲೆಗಳನ್ನು ಪಡೆಯದೇ ಜಾತಿ ಪ್ರಮಾಣ ಪತ್ರ ನೀಡಿದ ತಹಶೀಲ್ದಾರರು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸತೀಶ್ ಖಾರ್ವಿ ಕಂದಾಯ ಸಚಿವರಿಗೆ ದೂರು ನೀಡಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News