ಗುಲಾಬ್ ಜಾಮೂನ್ನಲ್ಲಿ ಕಾಣಿಸಿಕೊಂಡ ಬಿಳಿ ಬಣ್ಣದ ಹುಳ: ಎಲ್ಲರೂ ಓದಲೇಬೇಕಾದ ಸ್ಟೋರಿ

ಗುಲಾಬ್​ ಜಾಮೂನ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದೆಷ್ಟೋ ಜನ ಗುಲಾಬ್​ ಜಾಮೂನ್​ಗಾಗಿ ಜೀವನೇ ಬಿಡುತ್ತಾರೆ. ಆದರೇ ತಿನ್ನುವ ಗುಲಾಬ್​ ಜಾಮೂನ್​​ನಲ್ಲಿ ಹುಳ ಬಂದರೆ ಹೇಗಿರುತ್ತೆ.!? ಚೆನ್ನೈ ಅಂಗಡಿಯಿಂದ ಖರೀದಿಸಿದ ಗುಲಾಬ್ ಜಾಮೂನ್‌ನಲ್ಲಿ ಹುಳು ಸುಳಿಯುತ್ತಿರುವುದನ್ನು ವ್ಯಕ್ತಿಯೋರ್ವ ವೀಡಿಯೋ ಮಾಡಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ.

ಆಹಾರ ಬ್ಲಾಗರ್ ಒಬ್ಬರು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸಣ್ಣ ಬಿಳಿ ಹುಳುವೊಂದು ಗುಲಾಬ್ ಜಾಮೂನ್​​​ ಮೇಲೆ ಸುತ್ತುತ್ತಿರುವುದನ್ನು ಕಾಣಬಹುದು. ಈ ವೀಡಿಯೋ ವೈರಲ್ ಆಗಿದ್ದು, ಇಲ್ಲಿಯವರೆಗೆ ಸುಮಾರು 5 ಮಿಲಿಯನ್ ವೀವ್ಸ್​ ಪಡೆದುಕೊಂಡಿದೆ.

ಗುಲಾಬ್ ಜಾಮೂನ್‌ ಬಾಕ್ಸ್​​ ನಲ್ಲಿ ಚೆನ್ನೈನಲ್ಲಿರುವ ಔಟ್‌ಲೆಟ್‌ ಅನ್ನು ಉಲ್ಲೇಖಿಸಿದ್ದಾರೆ. ವೈರಲ್​​ ಆದ ವೀಡಿಯೋ ನೋಡಿದ ಅದೇ ಅಂಗಡಿಯ ವ್ಯಕ್ತಿಯೊರ್ವ ಈ ಘಟನೆಯ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.

Scroll to Top