ಬೆಂಗಳೂರು : ಹಿರಿಯ ನಟಿ ಲೀಲಾವತಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬೆಂಗಳೂರು ಹೊರವಲಯದ ಸೋಲದೇವನಹಳ್ಳಿಯಲ್ಲಿ ನೆಲೆಸಿರುವ ಹಿರಿಯ ನಟಿ ಲೀಲಾವತಿ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದಾರೆ. ಹೀಗಾಗಿ ಲೀಲಾವತಿಯವರ ಆರೋಗ್ಯ ವಿಚಾರಿಸಲು ಸ್ಯಾಂಡಲ್ವುಡ್ ನಟ ಹಾಗೂ ನಟಿಯರು, ಗಣ್ಯರು ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದಾರೆ.
ಮೊನ್ನೆಯಷ್ಟೇ ಹಿರಿಯ ನಟಿ ಲೀಲಾವತಿ ಮನೆಗೆ ಸ್ಯಾಂಡಲ್ವುಡ್ ನಟ ದರ್ಶನ್ ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಜೊತೆಗೆ ಬಹುಭಾಷಾ ನಟ ಅರ್ಜುನ್ ಸರ್ಜಾ ಕೂಡ ಈ ಹಿಂದೆ ಲೀಲಾವತಿಯವರ ಆರೋಗ್ಯ ವಿಚಾರಿಸಿದ್ದರು. ಇದೀಗ ಸ್ಯಾಂಡಲ್ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ದಂಪತಿ ಭೇಟಿ ಕೊಟ್ಟಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಲೀಲಾವತಿ ಅವರನ್ನು ನೋಡಲು ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಬಂದಿದ್ದಾರೆ.
ಇನ್ನು, ಇದೇ ವೇಳೆ ಮಾತಾಡಿದ ಶಿವರಾಜ್ ಕುಮಾರ್ ಅವರು ”ನನ್ನ ವಾಯ್ಸ್ ಕಂಡು ಹಿಡಿದರು. ಆ ವಯಸ್ಸಿನಲ್ಲೂ ತಾಳುವಂತ ಶಕ್ತಿ ಇದೆ ಅವರಿಗೆ. ಯೋಗ ಪುರುಷರು ಅವರು. ಒಳ್ಳೆಯ ಮನಸ್ಸಿದೆ. ಒಳ್ಳೆಯ ಆತ್ಮೀಯತೆ, ಪ್ರೀತಿ, ಆಶೀರ್ವಾದ ಇದೆ. ತುಂಬಾ ಪ್ರೀತಿ ಇದೆ. ಲೀಲಾವತಿ ಅವರನ್ನು ನೋಡಿದ್ರೆ ನನ್ನ ತಾಯಿ ನೋಡಿದಂತೆ ಆಗುತ್ತದೆ. ಇನ್ನೂ ಇರಬೇಕು ಅವರು. ನೋವಾಗುತ್ತದೆ ತಡೆದುಕೊಳ್ಳಬೇಕು ಎಂದು ಇದೇ ವೇಳೆ ವಿನೋದ್ ರಾಜ್ ಅವರ ಕೈ ಹಿಡಿದು ತಬ್ಬಿಕೊಂಡ ಧೈರ್ಯವಾಗಿ ಇರು” ಎಂದು ಹೇಳಿದ್ದಾರೆ.