ವಾಮಾಚಾರಕ್ಕಾಗಿ ಮಗುವಿನ ಶವವನ್ನೇ ಹೊರ ತೆಗೆದ ಹಂತಕರು.. ಸ್ಟೋರಿ ಓದಿದ್ರೆ ಶಾಕ್ ಆಗ್ತೀರಾ!

ಕೋಲಾರ : ಸಿಸಿಟಿವಿಯಲ್ಲಿ ಕಾಣೋ ಕಳ್ಳರು ನಾರ್ಮಲ್ ಕಳ್ಳರಲ್ಲ. ಯಾವುದೋ ಮನೆಗೆ ನುಗ್ಗಿ ವಸ್ತುಗಳನ್ನ ಕದ್ದವರು ಅಲ್ಲ. ಬದಲಿಗೆ ಮೃತಪಟ್ಟ ಮಗುವಿನ ಶವವನ್ನೇ ಸಮಾಧಿಯಿಂದ ಹೊರ ತೆಗೆದ ಹಂತಕರು.

ಹೌದು, ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದಲ್ಲಿ ವಾಮಾಚಾರ ಮಾಡೋಕ್ಕಾಗಿ ಮೃತ ಮಗುವಿನ ಶವ ಹೊರತೆಗೆದಿದ್ದಾರೆ ಅಂತ ದೂರು ದಾಖಲಾಗಿದೆ. ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದ ಹಮೀದಾ ಮತ್ತು ಆಕೆಯ 3 ವರ್ಷದ ಮಗುವಿನ ಅಂತ್ಯಕ್ರಿಯೆಯನ್ನ ಹೆಬ್ಬಟ ಕ್ರಾಸ್ ಸ್ಮಶಾನದಲ್ಲಿ ಮಾಡಲಾಗಿತ್ತು.

ಹಮೀದಾ ತನ್ನ ಪತಿ ಶೋಯೆಬ್ನ ವರದಕ್ಷಿಣೆ ಕಿರುಕುಳ ತಾಳಲಾರದೆ ಮಗುವಿನ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಪೋಷಕರು ದೂರು ನೀಡಿದ್ದಾರೆ. ಅಲ್ಲದೆ, ಆತನೇ ಮಗುವಿನ ಶವವನ್ನೂ ಹೊರ ತೆಗೆಸಿದ್ದಾನೆ. ವಾಮಾಚಾರಕ್ಕೆ ಯತ್ನಿಸಲಾಗಿದೆ ಅಂತಲೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಿಸಿಟಿವಿಯಲ್ಲಿ ಇಬ್ಬರು ವ್ಯಕ್ತಿಗಳ ಚಲನವಲನ ಸಹ ಸೆರೆಯಾಗಿದೆ. ಶ್ರೀರಾಮ್ ಹಾಗೂ ನಾರಾಯಣಸ್ವಾಮಿ ಎನ್ನುವವರ ವಿರುದ್ಧ ದೂರು ದಾಖಲಿಸಲಾಗಿದೆ.

You cannot copy content from Baravanige News

Scroll to Top