ಕಾಂತಾರ ಸಿನೆಮಾದಲ್ಲಿ ರಿಷಬ್ ಶೆಟ್ಟಿ ಓಡಿಸಿದ ಕೋಣಗಳಿಗೆ ಬೆಂಗಳೂರು ಕಂಬಳದಲ್ಲಿ ಚಿನ್ನದ ಪದಕ

ಬೆಂಗಳೂರು : ಕಾಂತಾರ ಸಿನೆಮಾದಲ್ಲಿ ನಟ ರಿಷಭ್ ಶೆಟ್ಟಿ ಓಡಿಸಲು ಬಳಸಿದ ಕೋಣಗಳಿಗೆ ಬೆಂಗಳೂರು ಕಂಬಳದಲ್ಲಿ ಚಿನ್ನದ ಪದಕ ಸಿಕ್ಕಿದೆ. ಕಣಹಲಗೆಯ ನಾಲ್ಕನೇ ರೌಂಡ್ ನಲ್ಲಿ ಆರುವರೆ ಅಡಿ ನೀರು ಚಿಮ್ಮಿಸುವ ಮೂಲಕ ಅಪ್ಪು-ಕಿಟ್ಟು ಎಂಬ ಕೋಣಗಳು ಭರ್ಜರಿ ಗೆಲುವು ಸಾಧಿಸಿವೆ.

ಅರಮನೆ ಮೈದಾನದಲ್ಲಿ ನಿರ್ಮಿಸಿರುವ ರಾಜ-ಮಹಾರಾಜ ಕೆರೆಯಲ್ಲಿ ಬೆಂಗಳೂರು ಕಂಬಳದ ಮೊದಲ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಅಪ್ಪು, ಕಿಟ್ಟು ಜೋಡಿ ಕೋಣಗಳು ಇತಿಹಾಸ ಬರೆದಿವೆ.


ಕಾಂತಾರ ಸಿನೆಮಾದಲ್ಲಿ ಬರುವ ಕಂಬಳದಲ್ಲಿ ಇದೆ ಅಪ್ಪು ಕಿಟ್ಟು ಎಂಬ ಕೋಣಗಳು ರಿಷಬ್ ಶೆಟ್ಟಿಯವರು ಓಡಿಸಿ ಪ್ರಶಸ್ತಿ ಗೆದ್ದಿದ್ದರು, ಅದೇ ರೀತಿ ಬೆಂಗಳೂರು ಕಂಬಳದಲ್ಲೂ ಕೂಡ ಪರಮೇಶ್ವರ ಭಟ್ ಮಾಲೀಕತ್ವದ ಈ ಕೋಣಗಳು ಇಂದು 6.5 ಕೋಲು ನೀರು ಎತ್ತರಕ್ಕೆ ನೀರು ಚಿಮ್ಮಿಸಿ ಚಿನ್ನದ ಪದಕ ಪಡೆದಿವೆ.

ಬಾನೆತ್ತರಕ್ಕೆ ನೀರು ಚಿಮ್ಮಿಸುತ್ತಾ ಈ ಕೋಣಗಳ ಓಟವನ್ನು ಅಲ್ಲಿ ನೆರೆದಿದ್ದವರು ಕಣ್ತುಂಬಿಕೊಂಡರು. ಕಾಂತಾರ ಸಿನಿಮಾ ಕೋಣಗಳಾಗಿರುವುದರಿಂದ ಜನರು ನೋಡಲು ಮುಗಿಬೀಳುತ್ತಿದ್ದು, ಮಂಗಳೂರು ಸೇರಿದಂತೆ ಬೆಂಗಳೂರಿಗರು ಬಂದು ಪೋಟೋ ತೆಗೆಸಿಕೊಂಡರು.

Scroll to Top