ಪುಣೆ : ಗಂಡ, ಹೆಂಡತಿ ಮಧ್ಯೆ ಸಣ್ಣ, ಸಣ್ಣ ವಿಚಾರಕ್ಕೆಲ್ಲಾ ಜಗಳ ನಡೆಯೋದು ಕಾಮನ್. ಆ ಜಗಳ, ಕಿತ್ತಾಟಗಳು ಆಗಲೇ ಬಗೆಹರಿದರೆ ತುಂಬಾ ಒಳ್ಳೆಯದು. ಇಲ್ಲದಿದ್ರೆ ಅನಾಹುತವೇ ಸಂಭವಿಸುತ್ತೆ. ಮಹಾರಾಷ್ಟ್ರದಲ್ಲಿ ಬರ್ತ್ ಡೇ ಆಚರಣೆಗೆ ಗಂಡ ದುಬೈಗೆ ಕರೆದೊಯ್ಯಲಿಲ್ಲ ಅನ್ನೋ ಕಾರಣಕ್ಕೆ ಕೊಲೆಯಾಗಿದ್ದು, ಹೆಂಡತಿ ಜೈಲು ಪಾಲಾಗಿದ್ದಾರೆ.
ಪುಣೆಯ ನಿಖಿಲ್ ಖನ್ನಾ ಹಾಗೂ ರೇಣುಕಾ ಜೋಡಿ ಕೇವಲ 6 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.
ಈ ದಂಪತಿ ಪುಣೆಯ ಐಷಾರಾಮಿ ಅಪಾರ್ಟ್‌ಮೆಂಟ್ ಒಂದರಲ್ಲಿ ಸಂಸಾರವೂ ಮಾಡುತ್ತಿದ್ದರು. ಕನಸ್ಟ್ರಕ್ಷನ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಪತಿ ನಿಖಿಲ್ ಖನ್ನಾ ರೇಣುಕಾಳನ್ನು ಪ್ರೀತಿಸಿ ಮದುವೆಯಾಗಿದ್ದ. 6 ವರ್ಷದಿಂದ ನಿಖಿಲ್ ಖನ್ನಾ ವೈವಾಹಿಕ ಜೀವನ ಚೆನ್ನಾಗಿಯೇ ಇತ್ತು.
ಇತ್ತೀಚೆಗೆ ನಿಖಿಲ್ ಹಾಗೂ ರೇಣುಕಾ ಮಧ್ಯೆ ಹುಟ್ಟುಹಬ್ಬದ ಆಚರಣೆಗೆ ದುಬೈಗೆ ಹೋಗುವ ವಿಚಾರಕ್ಕೆ ಜಗಳ ಆರಂಭವಾಗಿದೆ. ಬರ್ತ್ ಡೇ ಆಚರಿಸಲು ಕರೆದುಕೊಂಡು ಹೋಗದ ಗಲಾಟೆಯಲ್ಲಿ ಹೆಂಡತಿ ಗಂಡನ ಮುಖಕ್ಕೆ ಪಂಚ್ ಕೊಟ್ಟಿದ್ದಾರೆ. ಹೆಂಡತಿಯ ಏಟಿನಿಂದ ಗಂಡನ ಹಲ್ಲುಗಳು ಉದುರಿ ಹೋಗಿದೆ. ಹೆಂಡತಿ ಕೊಟ್ಟ ಪಂಚ್‌ಗೆ ಗಂಡನ ಮೂಗಿನಿಂದ ರಕ್ತಸ್ರಾವ ಉಂಟಾಗಿದೆ. ಪ್ರಜ್ಞೆ ಕಳೆದುಕೊಂಡು ಬಿದ್ದ ಗಂಡ ನಿಖಿಲ್ ಖನ್ನಾ ಸಾವನ್ನಪ್ಪಿದ್ದಾರೆ.
ದುಬೈನಲ್ಲಿ ಬರ್ತ್ ಡೇ ಆಚರಿಸೋ ಹಠಕ್ಕೆ ಬಿದ್ದ ಹೆಂಡತಿ ಕೊಟ್ಟ ಪಂಚ್‌ಗೆ ಗಂಡ ಸಾವನ್ನಪ್ಪಿದ್ದಾರೆ. ಪುಣೆಯ ವನವಾಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದ್ದು, ಪತ್ನಿ ರೇಣುಕಾರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.