Monday, July 15, 2024
Homeಸುದ್ದಿಕರಾವಳಿಕಂಬಳದಲ್ಲೂ ಹುತಾತ್ಮ ಯೋಧ ಪ್ರಾಂಜಲ್ಗೆ ಗೌರವ; 2 ದಿನಗಳ ಹಬ್ಬಕ್ಕೆ ಚಾಲನೆ ಕೊಟ್ಟ ಅಶ್ವಿನಿ ಪುನೀತ್...

ಕಂಬಳದಲ್ಲೂ ಹುತಾತ್ಮ ಯೋಧ ಪ್ರಾಂಜಲ್ಗೆ ಗೌರವ; 2 ದಿನಗಳ ಹಬ್ಬಕ್ಕೆ ಚಾಲನೆ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್

ಬೆಂಗಳೂರು: ಅದ್ಧೂರಿಯಾದ ಸಮಾರಂಭದಲ್ಲಿ ನಮ್ಮ ಕಂಬಳ, ಬೆಂಗಳೂರು ಕಂಬಳ ಸ್ಪರ್ಧೆಯನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಉದ್ಘಾಟನೆ ಮಾಡಿದರು. ಇದರಿಂದ ಇದೇ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಕಂಬಳ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ಇಂದು ಮತ್ತು ನಾಳೆ ಈ ಸ್ಪರ್ಧೆ ನಡೆಯಲಿದ್ದು ಒಟ್ಟು 178 ಜೋಡಿ ಕೋಣಗಳು ಇದರಲ್ಲಿ ಭಾಗವಹಿಸಿವೆ.ಬೆಂಗಳೂರು ಕಂಬಳ ಸ್ಪರ್ಧೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಚಾಲನೆ ನೀಡಿದರು. ಇದಕ್ಕೂ ಮುನ್ನ ಕಂಬಳ ಕರೆಗಳಿಗೆ ಭಾಗಿಯಾಗಿದ್ದ ಗಣ್ಯರು ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಂಸದೆ ಶೋಭಾಕರಂದ್ಲಾಜೆ, ಸಂಗೀತ ನಿರ್ದೇಶದ ಗುರು ಕಿರಣ್, ಸಂಸದ ಪಿಸಿ ಮೋಹನ್, ಡಿ.ವಿ ಸದಾನಂದಗೌಡ, ವಿಶ್ವನಾಥ್ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಂಬಳದ ಕಾರ್ಯಕ್ರಮದಲ್ಲಿ ಜಮ್ಮುಕಾಶ್ಮೀರದಲ್ಲಿ ವೀರಮರಣ ಹೊಂದಿದ್ದ ಯೋಧ ಎಂವಿ ಪ್ರಾಂಜಲ್ ಅವರಿಗಾಗಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಇನ್ನು ಕರಾವಳಿಯ ಮಣ್ಣಿನ ಸಂಸ್ಕೃತಿ ಹಾಗೂ ಪ್ರತಿಷ್ಟೆಯ ಪ್ರತೀಕವಾಗಿರುವ ಕಂಬಳವನ್ನು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈಗಾಗಲೇ ಕೋಣಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿವೆ. ಸಾಕಷ್ಟು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News