Monday, July 15, 2024
Homeಸುದ್ದಿರಾಜ್ಯ‘ಇದು ಬರಿ ಬೆಳಕಲ್ಲ, ದರ್ಶನ’: ಟ್ಯಾಗ್ ಲೈನೊಂದಿಗೆ ಬಿಗ್ ಅಪ್ಡೇಟ್ ಕೊಟ್ಟ ಕಾಂತಾರ ಸಿನಿಮಾ ತಂಡ..!

‘ಇದು ಬರಿ ಬೆಳಕಲ್ಲ, ದರ್ಶನ’: ಟ್ಯಾಗ್ ಲೈನೊಂದಿಗೆ ಬಿಗ್ ಅಪ್ಡೇಟ್ ಕೊಟ್ಟ ಕಾಂತಾರ ಸಿನಿಮಾ ತಂಡ..!

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ‌ ನಟಿಸಿ, ನಿರ್ದೇಶನ ಮಾಡಿದ್ದ ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿತ್ತು. ವಿಶ್ವದಾದ್ಯಂತ ಪ್ರೇಕ್ಷಕರನ್ನು ಸೆಳೆಯುವುದರ ಜೊತೆಗೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಈ ಯಶಸ್ಸಿನ ಬೆನ್ನಲ್ಲೇ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ವೆಲ್ ಮಾಡಲು ಮುಂದಾಗಿರೋದು ಎಲ್ಲರಿಗೂ ಗೊತ್ತಿದೆ. ಇದೀಗ ಸಿನಿಮಾ ತಂಡ, ಕಾಂತಾರ ಚಿತ್ರದ ಮೊದಲಿನ ಭಾಗದ ಬಗ್ಗೆ ಹೊಸ ಅಪ್ಡೇಟ್ ನೀಡಿದೆ.

ಕಾಂತಾರ ಸಿನಿಮಾದ ಭಾಗ- 1ರ ಫಸ್ಟ್ಲುಕ್ ನಾಡಿದ್ದು, ಅಂದರೆ ನವೆಂಬರ್ 27 ರಂದು 12 ಗಂಟೆ 25 ನಿಮಿಷಕ್ಕೆ ರಿಲೀಸ್ ಮಾಡುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ.

ಬಿಡುಗಡೆ ಮಾಡಿರುವ ಪೋಸ್ಟರ್ವೊಂದು ಕೆಂಡದ ಬೆಂಕಿಯಂತೆ ಫೋಟೋ ಇದ್ದು ‘ಇದು ಬರಿ ಬೆಳಕಲ್ಲ, ದರ್ಶನ’ ಎನ್ನುವ ಟ್ಯಾಗ್ ಲೈನ್ ಹೊಂದಿದೆ. ಈ ಸಿನಿಮಾ ಮತ್ತೊಂದು ಮೈಲಿಗಲ್ಲು ಸಾಧನೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಿದ್ದಾರೆ ರಿಷಬ್ ಶೆಟ್ಟಿ ಫ್ಯಾನ್ಸ್.

ಅಭಿಮಾನಿಗಳಂತೂ ಕಾಂತಾರ ಭಾಗ-1ರ ಬಗ್ಗೆ ಕಾತುರದಿಂದ ಕಾಯುತ್ತಿದ್ದಾರೆ. ಫಸ್ಟ್ ಲುಕ್ ರಿಲೀಸ್ ಮಾಡುತ್ತಿರುವ ಸುದ್ದಿ ಕೇಳಿ ಅಭಿಮಾನಿಳು ಹಿರಿಹಿರಿ ಹಿಗ್ಗಿದ್ದಾರೆ. ಕರಾವಳಿ, ಮಲೆನಾಡು ಪ್ರದೇಶಗಳು ಸೇರಿದಂತೆ ನಾನಾ ಕಡೆ ಸುತ್ತಿ ಡಿವೈನ್ ಸ್ಟಾರ್ ಕಾಂತಾರ ಸಿನಿಮಾದ ಭಾಗ- 1 ಶೂಟಿಂಗ್ ಮಾಡಿದ್ದಾರೆ. ಕೆಲವೊಂದು ಸೀನ್ ಶೂಟ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ಕಾಂತಾರ ಸಿನಿಮಾದ 2ನೇ ಭಾಗವು ಸಕ್ಸಸ್ ಕಂಡು ಪ್ರೇಕ್ಷಕರ ವಲಯವಂತೂ ಸಿನಿಮಾ ನೋಡಿ ಫುಲ್ ಫಿದಾ ಆಗಿದ್ದರು. ಕಾಂತಾರ ಮೊದಲ ಭಾಗದ ಬಗ್ಗೆಯೂ ಭಾರೀ ನಿರೀಕ್ಷೆಯಿದ್ದು 7 ಭಾಷೆಯಲ್ಲಿ ಮೂವಿ ರಿಲೀಸ್ ಆಗಲಿದೆಯಂತೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬೆಂಗಾಳಿ ಹಾಗೂ ಇಂಗ್ಲೀಷ್ನಲ್ಲೂ ರಿಲೀಸ್ ಮಾಡಲಾಗುತ್ತದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News