Saturday, April 27, 2024
Homeಸುದ್ದಿರಾಜ್ಯ ಚುನಾವಣಾ ಆಯೋಗದಿಂದ ಛಾಯಾಚಿತ್ರ ಸ್ಪರ್ಧೆ; ಫೋಟೋ ಕ್ಲಿಕ್ಕಿಸಿ 25 ಸಾವಿರ ರೂ. ಬಹುಮಾನ ಗೆಲ್ಲಿ

ರಾಜ್ಯ ಚುನಾವಣಾ ಆಯೋಗದಿಂದ ಛಾಯಾಚಿತ್ರ ಸ್ಪರ್ಧೆ; ಫೋಟೋ ಕ್ಲಿಕ್ಕಿಸಿ 25 ಸಾವಿರ ರೂ. ಬಹುಮಾನ ಗೆಲ್ಲಿ

ನಾಳೆ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಸುಮಾರು 2,88,19,342 ಮತದಾರರು ಮತದಾನ ಮಾಡಲಿದ್ದಾರೆ.

ರಾಜ್ಯ ಚುನಾವಣಾ ಆಯೋಗವು ಛಾಯಾಚಿತ್ರ ಸ್ಪರ್ಧೆಯನ್ನು ಹಮ್ಮಿಕೊಂಡಿದೆ..

ನಾಳೆ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. 7 ಗಂಟೆಯಿಂದ ಮತದಾನ ಪ್ರಾರಂಭವಾಗಲಿದೆ. ಸುಮಾರು 2,88,19,342 ಮತದಾರರು ಮತದಾನ ಮಾಡಲಿದ್ದಾರೆ. ಅದರಲ್ಲಿ 1,44,28,099 ಪುರುಷರು, 1,43,88,176 ಮಹಿಳೆಯರು ಮತದಾನ ಮಾಡಲಿದ್ದಾರೆ. ಸುಮಾರು 3,067 ತೃತೀಯ ಲಿಂಗಿಗಳು ಮತ ಚಲಾಯಿಸಲಿದ್ದಾರೆ.

ಮತದಾನದ ಸಂದರ್ಭದಲ್ಲಿ ರಾಜ್ಯ ಚುನಾವಣಾ ಅಯೋಗವು ಛಾಯಾಚಿತ್ರ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಮತದಾನ ವಿಷಯವಾಗಿ ಈ ಸ್ಪರ್ಧೆಯನ್ನು ಏರ್ಪಡಿಸಿದೆ.

ಎಲೆಕ್ಷನ್​ ದಿನ ವಿಶಿಷ್ಟ ಫೋಟೋದಲ್ಲಿ ಸೆರೆಹಿಡಿದರೆ ನಗದು ಬಹುಮಾನ ನೀಡುವುದಾಗಿ ರಾಜ್ಯ ಚುನಾವನಾ ಆಯೋಗ ಘೋಷಿಸಿದೆ.

ಅಷ್ಟು ಮಾತ್ರವಲ್ಲ, ಅತ್ಯುತ್ತಮ ಫೋಟೋ ಕ್ಲಿಕ್ಕಿಸಿದರೆ ಪ್ರಮಾಣ ಪತ್ರದ ಜೊತೆಗೆ ನಗದನ್ನು ನೀಡುವುದಾಗಿ ತಿಳಿಸಿದೆ.

ಫೋಟೋ ಕ್ಲಿಕ್ಕಿಸಿದ ಬಳಿಕ ಛಾಯಾಗ್ರಾಹಕರ ವಿವರಗಳನ್ನು [email protected] ಸಲ್ಲಿಸಬೇಕಿದೆ.

ಮೇ 15ರವರೆಗೆ ಫೋಟೋ ಕಳುಹಿಸಲು ಸಮಯವಕಾಶ ನೀಡಲಾಗಿದೆ. ಅತ್ಯುತ್ತಮ ಫೋಟೋಗೆ ಬಹುಮಾನ ಸಿಗಲಿದೆ.

ಅಂದಹಾಗೆಯೇ ಬೆಸ್ಟ್​ ಫೋಟೋ ಕ್ಲಿಕ್ಕಿಸಿದ ವಿಜೇತರಿಗೆ ಪ್ರಥಮ 25 ಸಾವಿರ, ದ್ವಿತೀಯ 15 ಸಾವಿರ ಮತ್ತು ತೃತೀಯ 10 ಸಾವಿರ ಬಹುಮಾನ ಸಿಗಲಿದೆ.

ಇದಲ್ಲದೆ ಸಮಾಧಾನಕರ ಬಹುಮಾನವಾಗಿ 6 ಸಾವಿರ ರೂಪಾಯಿ ಜೊತೆಗೆ ವಿಶೇಷ ಬಹುಮಾನವಾಗಿ 5 ಸಾವಿರ ರೂಪಾಯಿ ನಗದು ಸಿಗಲಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News